ಟಿಪ್ಪರ್ ಲಾರಿ ಚಾಲಕ ಬಾವಿಯ ರಾಟೆಯಲ್ಲಿ ನೇಣುಬಿಗಿದು ಸಾವು

ಕಾಸರಗೋಡು: ಟಿಪ್ಪರ್ ಲಾರಿ ಚಾಲಕನೋರ್ವ ಬಾವಿಯ ರಾಟೆಯಲ್ಲಿ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಬೇಡಗಂ ಕೊಳತ್ತೂರು  ನಿವಾಸಿ ರಾಮಚಂದ್ರನ್ (42) ಎಂಬವರು ಮೃತ ವ್ಯಕ್ತಿ. ಮೈಲಾಟಿಯಲ್ಲಿರುವ ಬಾವಿಯೊಂದರ ರಾಟೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಇವರು ಪತ್ತೆಯಾಗಿದ್ದಾರೆ.  ಮೃತದೇಹದ ಮರಣೋತ್ತರ ಪರೀಕ್ಷೆ ಜನರಲ್ ಆಸ್ಪತ್ರೆಯಲ್ಲಿ ನಡೆಸಲಾ ಯಿತು. ದಿ| ಮುತ್ತು ನಾಯರ್-ಜಾನಕಿ ಅಮ್ಮ ದಂಪತಿಯ ಪುತ್ರನಾದ ಮೃತರು ಸಹೋದರ-ಸಹೋದರಿಯರಾದ ಕುಂಞಂಬು, ಜನಾರ್ದನನ್, ಶ್ರೀಧರನ್, ಮಣಿಕಂಠನ್, ದೇವಕಿ, ರೋಹಿಣಿ, ಸಾವಿತ್ರಿ, ತಂಗಮಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page