ಚಿಪ್ಪಾರು ಖಂಡಿಗೆಯಲ್ಲಿ ಲಾರಿ-ಬಸ್ ಅಪಘಾತ : ಪ್ರಯಾಣಿಕರು ಅಪಾಯದಿಂದ ಪಾರು

ಪೈವಳಿಕೆ: ಖಾಸಾಗಿ ಬಸ್ ಹಾಗೂ ಲಾರಿ ಮಧ್ಯೆ ಉಂಟಾದ ಅಪಘಾತದಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಳದಿಂದ ಕುರುಡಪದವುಗೆ ಸಂಚರಿಸುತ್ತಿರುವ ಖಾಸಗಿ ಬಸ್ ಹಾಗೂ ಎದುರು ಭಾಗದಿಂದ ಆಗಮಿಸಿದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಶನಿವಾರ ಮಧ್ಯಾಹ್ನ ಚಿಪ್ಪಾರು ಬಳಿಯ ಖಂಡಿಗೆ ಎಂಬಲ್ಲಿ ಅಪಘಾತ ಉಂಟಾಗಿದೆ. ಇಳಿಜಾರಿನಲ್ಲಿ ಲಾರಿಯ ಬ್ರೇಕ್ ಸಿಗದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಲಾರಿ ಬಸ್‌ಗೆ ಡಿಕ್ಕಿಹೊಡೆದಿನೆನ್ನಲಾಗಿದೆ. ಬಸ್-ಲಾರಿ ಹಾನಿಗೊಂಡಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲಿ ಅಲ್ಪ ಹೊತ್ತು ಸಂಚಾರ ಸ್ಥಗಿತಗೊಂಡಿದೆ. ಅಗಲ ಕಿರಿದಾಗಿರುವುದÉÃ ರಸ್ತೆ ಹದಗೆಟ್ಟು ಅಪಘಾತ ಉಂಟಾಗಲು ಕಾರಣವೆಂದು ನಾಗರಿಕರು ದೂರಿದ್ದಾರೆ. ಈ ರಸ್ತೆ ದುರಸ್ತಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ÷್ಯ ವಹಿಸುತ್ತಿರುವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

You cannot copy contents of this page