ಬಂದ್ಯೋಡು ಪರಿಸರದಲ್ಲಿ ವ್ಯಾಪಕಗೊಂಡ ಹಳದಿ ಕಾಮಾಲೆ

ಉಪ್ಪಳ: ಹಳದಿ ಕಾಮಾಲೆ ವ್ಯಾಪಕಗೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಬಂದ್ಯೋಡು ಎಂ.ಎಸ್. ರೋಡ್ ಹಾಗೂ ಪರಿಸರದಲ್ಲಿ ಮಕ್ಕಳು, ಮಹಿಳೆಯರ ಸಹಿತ ೧೫ಕ್ಕೂ ಮಿಕ್ಕು ಮಂದಿಗೆ ಹಳದಿ ಕಾಮಾಲೆ ಬಾಧಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಪೈಕಿ ಹಲವು ಮಂದಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇನ್ನೂ ಹಲವರು ವಿಶ್ರಾಂತಿಯಲ್ಲಿದ್ದಾರೆ. ಒಂದು ಬಾರಿ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ  ಚಿಕಿತ್ಸೆಗೆ ಕ್ರಮ ಕೈಗೊಂಡಿ ದ್ದರು.

ಆದರೆ ಇನ್ನೂ ಹರಡುವ ಭೀತಿಯಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಅಟ್ಟೆಗೋಳಿ ಮದ್ರಸದ ಹಲವಾರು ವಿದ್ಯಾರ್ಥಿಗಳಿಗೆ ಇದೇ ರೀತಿ ಹಳದಿ ಕಾಮಾಲೆ ಬಾಧಿಸಿತ್ತು. ಪೈವಳಿಕೆ ಪಂಚಾಯತ್ ಹಾಗೂ ಬಾಯಾರು ಆರೋಗ್ಯ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ ಚಿಕಿತ್ಸೆಗೆ ಕ್ರಮ ಕೈಗೊಂಡಿದ್ದರು. ಇದೀಗ ಬಂದ್ಯೋಡು ಎಂ.ಎಸ್ ರೋಡ್ ಪರಿಸರದಲ್ಲಿ ಕಾಯಿಲೆ ವ್ಯಾಪಕಗೊಂಡಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.

RELATED NEWS

You cannot copy contents of this page