ಹಿಂದಕ್ಕೆ ಚಲಿಸಿದ ಟಿಪ್ಪರ್ ಲಾರಿ ಬಡಿದು ವೃದ್ಧ ಸಾವು

ಕಾಸರಗೋಡು: ಹಿಂದಕ್ಕೆ ಚಲಿಸುತ್ತಿದ್ದ ಟಿಪ್ಪರ್ ಲಾರಿಯಡಿ ಸಿಲುಕಿ ವೃದ್ಧ ಮೃತಪಟ್ಟ ಘಟನೆ ನಡೆದಿದೆ. ಕೋಳಿಚ್ಚಾಲ್ ಬಳಿಯ ಕರೋಟ್‌ಪುರ ಎಂಬಲ್ಲಿನ ವರ್ಗೀಸ್ (96) ಮೃತ ವ್ಯಕ್ತಿ. ನಿನ್ನೆ ಬೆಳಿಗ್ಗೆ ಕೋಳಿಚ್ಚಾಲ್ ಸೇತುವೆ ನಿರ್ಮಾಣ ನಡೆಯುವ ಸ್ಥಳದಲ್ಲಿ ಘಟನೆ ನಡೆದಿದೆ. ಸೇತುವೆಗಾಗಿ ಮಣ್ಣು ಇಳಿಸಿ ಹಿಂದಕ್ಕೆ ಚಲಿಸಿದ ಟಿಪ್ಪರ್‌ನ ಹಿಂಭಾಗ ವರ್ಗೀಸ್‌ರಿಗೆ ಬಡಿದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಚೆರುಪುಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ತ್ರೇಸ್ಯಮ್ಮ, ಮಕ್ಕಳಾದ ಜೋನಿ, ರಾಜು, ಡೈಸಿ, ಶಾಜಿ, ಥೋಮಸ್, ಅಳಿಯ-ಸೊಸೆಯಂದಿರಾದ ಎಲ್ಸಿ, ಮೋಳಿ, ಲಿಸಿ, ಥೋಮಸ್, ರೆಸಿಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page