ಮಿನಿ ಲಾರಿ- ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು

ಕಾಸರಗೋಡು: ಮಿನಿ ಲಾರಿ    ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಪೆರಿಯ ಪುಲ್ಲೂರು ಕುರುಂಬಾಲದ ಕೆ. ಕೃಷ್ಣದಾಸ್ (46) ಮೃತ ವ್ಯಕ್ತಿ. ವೆಳ್ಳಿಕ್ಕೋತ್ ಪೇರಳದಲ್ಲಿ ನಿನ್ನೆ ಮಧ್ಯಾಹ್ನ ಅಪಘಾತ ಸಂಭವಿಸಿದೆ. ಕೃಷ್ಣದಾಸ್‌ರ ಜತೆ ಸ್ಕೂಟರ್‌ನಲ್ಲಿದ್ದ ಸಹೋದರ ಕೃಷ್ಣ ಕುಮಾರ್ ಗಾಯ ಗೊಂಡಿದ್ದು, ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.ಕೆ. ರಾಮನ್- ಪಾರ್ವತಿ ದಂಪತಿಯ ಪುತ್ರನಾಗಿರುವ  ಮೃತರು ಪತ್ನಿ ದಿವ್ಯ, ಮಕ್ಕಳಾದ ದೃಶ್ಯದಾಸ್, ಶ್ರದ್ಧಾದಾಸ್, ಸಹೋದರ ಸಹೋದರಿಯರಾದ ಕೃಷ್ಣಕುಮಾರ್ , ಚಂದ್ರಿಕ, ಅಂಬಿಕ, ಜಯನ್ ಮೊದಲಾದವರನ್ನು ಅಗಲಿದ್ದಾರೆ.

RELATED NEWS

You cannot copy contents of this page