ಪೊಲೀಸ್ ಸಹಾಯ ಕೇಂದ್ರದ ಗಾಜನ್ನು ಹೊಡೆದು ಪುಡಿಗೈದ ಯುವಕ

ಕಾಸರಗೋಡು:  ಕಾಸರಗೋಡು ಹೊಸ ಬಸ್ ನಿಲ್ದಾಣ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಪೊಲೀಸ್ ಸಹಾಯ ಕೇಂದ್ರ (ಎಯ್ಡ್ ಪೋಸ್ಟ್) ನ ಕಿಟಕಿ ಗಾಜುಗಳನ್ನು ಯಾವುದೋ ಅಮಲಿನಲ್ಲಿ  ಯುವಕನೋರ್ವ ಹೊಡೆದು ಹಾನಿಗೊಳಿಸಿದ ಘಟನೆ ನಿನ್ನೆ ಸಂಜೆ ನಡೆದಿದೆ. ಇದರಿಂದ ಸುಮಾರು 1300 ರೂ.ಗಳ ನಷ್ಟ ಅಂದಾಜಿಸಲಾಗಿದೆ.

ಇದಕ್ಕೆ ಸಂಬಂಧಿಸಿ ಮಧೂರು ಕೊಲ್ಯ ನಿವಾಸಿ ಗಣೇಶ್ (25) ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

RELATED NEWS

You cannot copy contents of this page