ಕುಂಬಳೆ: ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದ ಯುವಕ ಹಾಗೂ ಸ್ನೇಹಿತೆಗೆ ತಂಡವೊಂದು ಚಾಕು ತೋ ರಿಸಿ ಬೆದರಿಕೆಯೊಡ್ಡಿ ಅಪಹರಿಸಿಕೊಂ ಡೊಯ್ದ ಬಳಿಕ ಅವರಿಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ಈ ಘಟನೆಗೆ ಸಂಬಂ ಧಿಸಿ ಕೇಸು ದಾಖಲಿಸಿಕೊಂಡ ಕುಂಬಳೆ ಪೊಲೀಸರು ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿದೆ.
ಮೊಗ್ರಾಲ್ ಮೈಮೂನ್‌ನಗರ ನೀರೋಳಿ ಹೌಸ್‌ನ ಅಪ್ಸಲ್ (29), ಕುನ್ನಿಲ್ ಹೌಸ್‌ನ ಮುಹಮ್ಮದ್ ಮನ್ಸೂರ್ ಯಾನೆ ಜಿನ ಯಾನೆ ಫೈಸಿ (27) ಎಂಬಿವರನ್ನು ಕುಂಬಳೆ ಎಸ್ ಐ ಗಣೇಶ್ ಸೆರೆಹಿಡಿದಿದ್ದಾರೆ. ಈ ಪೈಕಿ ಅಪ್ಸಲ್ 2004ರಲ್ಲಿ ಕುಂಬಳೆ ಪೊಲೀ ಸರು ದಾಖಲಿಸಿಕೊಂಡ ಕೊಲೆ ಪ್ರಕರ ಣವೊಂದರ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇದರ ಹೊರತು ಗಾಂಜಾ, ಮದ್ಯ ಸೇವಿಸಿ ವಾಹನ ಚಾಲನೆ ಮೊದಲಾದ ಪ್ರಕರಣಗಳು ದಾಖಲಾಗಿರುವು ದಾಗಿಯೂ ಪೊಲೀಸರು ತಿಳಿಸಿದ್ದಾರೆ. ಮನ್ಸೂರ್ ವಿರುದ್ಧ ಕೊಲೆಯತ್ನ, ಕಳವು, ಆಯುಧ ನಿಯಮಗಳ ಪ್ರಕಾರ ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ.
ಮೊಗ್ರಾಲ್ ಮೈಮೂನ್ ನಗರದ ಇ. ಮುಹಾಸಿರ್ (20), ಸ್ನೇಹಿತೆಯಾದ 18ರ ಹರೆಯದ ಯುವತಿಯನ್ನು ಆರೋಪಿಗಳು ಅಪಹರಿಸಿದ್ದರು. ಈ ಸಂಬಂಧ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಈರೀತಿ ತಿಳಿಸಲಾಗಿದೆ: “ನಿನ್ನೆ ಮಧ್ಯಾಹ್ನ ಕುಂಬಳೆ ಬಳಿಯ ಅನಂತಪುರ ಕ್ಷೇತ್ರ ಸಮೀಪದ ಹಳೆಯ ತರವಾಡು ಮನೆಯ ಮುಂದೆ ಕಾರಿನಲ್ಲಿ ಕುಳಿತು ಮುಹಸಿರ್ ಹಾಗೂ ಸ್ನೇಹಿತೆ ಮಾತನಾಡುತ್ತಿದ್ದರು. ಈ ಮಧ್ಯೆ ಆಟೋ ರಿಕ್ಷಾದಲ್ಲಿ ತಲುಪಿದ ಮೂವರು ಮುಹಾಸಿರ್‌ಗೆ ಹಲ್ಲೆಗೈದು ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ಆರೋಪಿಗಳು ಕಾರನ್ನು ಸೀತಾಂಗೋಳಿ ಭಾಗಕ್ಕೆ ಸಾಗಿಸಿದ್ದಾರೆ. ಸೀತಾಂಗೋಳಿಯ ಬಿವರೇಜಸ್ ಮದ್ಯದಂಗಡಿಯ ಮುಂಭಾಗಕ್ಕೆ ತಲುಪಿಸಲಾಯಿತು. ಬಳಿಕ ಅಲ್ಲಿ ೫೦೦ ರೂಪಾಯಿಯನ್ನು ಪಡೆದುಕೊಂಡ ತಂಡದ ಓರ್ವ ಚಾಕು ತೋರಿಸಿ ಬೆದರಿಕೆಯೊಡ್ಡಿದ್ದು, ಮೊಬೈಲ್ ಫೋನ್ ಕಸಿದ ಬಳಿಕ ೫೦ ಲಕ್ಷ ರೂಪಾಯಿ ನೀಡುವಂತೆ ಒತ್ತಾ ಯಿಸಿದ್ದಾನ. ಹಣ ನೀಡಲು ಸಿದ್ಧವಾಗದ ಹಿನ್ನೆಲೆಯಲ್ಲಿ ಕಾರು ಸಹಿತ ಆರೋಪಿಗಳು ಅಪರಿಮಿತ ವೇಗದಲ್ಲಿ ಸಂಚರಿಸಿದ್ದಾರೆ. ಈಮಧ್ಯೆ ಆ ರಸ್ತೆಯಲ್ಲಿ ಬಂದ ಇನ್ನೋವ ಕಾರಿಗೆ ತಂಡ ಸಂಚರಿಸಿದಕಾರು ಒರೆಸಿದ್ದು, ಈ ವಿಷಯದಲ್ಲಿ ವಾಗ್ವ್ವಾದವುಂ ಟಾಯಿತು. ಬೊಬ್ಬೆ ಕೇಳಿ ತಲುಪಿದ ಸ್ಥಳೀಯರು ಹಾಗೂ ವಿಷಯ ತಿಳಿದು ಕುಂಬಳೆ ಪೊಲೀಸರು ಅಲ್ಲಿಗೆ ತಲುಪಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸ ರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಈವೇಳೆ ಅಪ್ಸಲ್ ಹಾಗೂ ಮನ್ಸೂರ್ ನನ್ನು ಕಸ್ಟಡಿಗೆ ತೆಗೆಯಲಾಯಿತು”. ಇದೇ ವೇಳೆ ಅಲ್ಲಿಂದ ಪರಾರಿಯಾದ ಮೂರನೇ ಆರೋಪಿಯನ್ನು ಪತ್ತೆಹಚ್ಚಲು ಶೋಧ ತೀವ್ರಗೊಳಿಸಿರುವು ದಾಗಿ ಪೊಲೀಸರು ತಿಳಿಸಿದ್ದಾರೆ.





