ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮ್ಮೇಳನ 18ರಂದು

ಕಾಸರಗೋಡು: ಸಹಕಾರ ಭಾರತಿ ಕಾಸರಗೋಡು ತಾಲೂಕು ಸಮ್ಮೇಳನ ಮೇ 18ರಂದು ಅಪರಾಹ್ನ 3 ಗಂಟೆಗೆ ಕಾಸರಗೋಡು ಟೌನ್ ಬ್ಯಾಂಕ್ ಹಾಲ್‌ನಲ್ಲಿ ನಡೆಯಲಿದೆ. ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರ್ ಉದ್ಘಾಟಿಸುವರು. ತಾಲೂಕು ಅಧ್ಯಕ್ಷ ನಾರಾಯಣನ್ ಕಲ್ಹಾದ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಟೌನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎ.ಸಿ. ಅಶೋಕ್ ಕುಮಾರ್, ಸಹಕಾರ ಭಾರತಿ ಎಂಪ್ಲೋಯೀಸ್ ಸಂಘದ ತಾಲೂಕು ಅಧ್ಯಕ್ಷ ಉದಯ ಬೆಳ್ಳೂರು, ಸಹಕಾರ ಭಾರತಿ ತಾಲೂಕು ಕೋಶಾಧಿಕಾರಿ ಹರಿ ಮಧೂರು, ಕಾರ್ಯದರ್ಶಿ ಗಣಪತಿ ಪ್ರಸಾದ್ ಮೊದಲಾದವರು ಉಪಸ್ಥಿತರಿರುವರು.

You cannot copy contents of this page