ಶಂಸುಲ್ ಉಲಮ ಇಸ್ಲಾಮಿಕ್ ಅಕಾಡೆಮಿ ಲಾಂಛನ ಬಿಡುಗಡೆ
ಎದುರ್ತೋಡು: ಶಂಸುಲ್ ಉಲಮ ಇಸ್ಲಾಮಿಕ್ ಅಕಾಡೆಮಿಯ ಲಾಂಛನವನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಅಧ್ಯಕ್ಷ ಸಯ್ಯಿದುಲ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಟ್ರಸ್ಟ್‌ನ ಚೆಯರ್‌ಮೆನ್ ಇ. ಅಬ್ದುಲ್ಲ ಕುಂಞಿಗೆ ನೀಡಿ ಬಿಡುಗಡೆ ಮಾಡಿದರು.
ಎದುರ್ತೋಡು ಅಲ್ಬೀರ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿ ವಿನ್ ಅಧ್ಯಕ್ಷ ಸಯ್ಯಿದ್ ಹುಸೈನ್ ತಂಙಳ್ ಮಾಸ್ತಿಕುಂಡ್, ಎದುರ್ತೋಡು ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸರ್ ಯಮಾನಿ, ಜಮಾಅತ್ ಕಮಿಟಿ ಅಧ್ಯಕ್ಷ ಎಂ. ಅಬ್ದುಲ್ಲ ಕುಂಞಿ ಹಾಜಿ, ಸೆಕ್ರೆಟರಿ ಇ. ಅಬೂಬಕರ್ ಹಾಜಿ, ಜಮಾಅತ್ ಖಜಾಂಜಿ ಬೇರ್ಕ ಅಬ್ದುಲ್ಲ ಕುಂಞಿ ಹಾಜಿ, ಹಸನ್ ನೆಕ್ಕರ, ವೈ ಅಬ್ದುಲ್ ಹಮೀದ್, ರಸಾಕ್ ಅರ್ಶಬಿ, ಶಂಸುಲ್ ಉಲಮ ಇಸ್ಲಾಮಿಕ್ ಅಕಾಡೆಮಿ ಕೋಆರ್ಡಿನೇಟರ್ ಆಶಿಖ್ ಹುದವಿ ಚಾನಡ್ಕ ಮೊದಲಾದವರು ಮಾತನಾ ಡಿದರು. ಅಲ್ಬೀರ್ ಸ್ಕೂಲ್ ಎದುರ್ತೋಡು, ವೈಎಂಕೆ ಮೆಮೋರಿಯಲ್ ಅಲ್ಬೀರ್ ಸ್ಕೂಲ್ ಮಾವಿನಕಟ್ಟೆ, ಶಂಸುಲ್ ಉಲಮ ಅಲ್ಬೀರ್ ಸ್ಕೂಲ್ ಬೇರ್ಕ ಚೆರ್ಕಳ, ಬಿಸ್ಮಿ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬಾಲಡ್ಕ ಚೆರ್ಕಳ ಮೊದಲಾದ ಶಿಕ್ಷಣ ಸಂಸ್ಥೆಗಳು ಪ್ರಸ್ತುತ ಅಕಾಡೆಮಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿವೆ.