ಶನೈಶ್ಚರ ಪೂಜೆಯಿಂದ ಪುನೀತರಾದ ಭಕ್ತರು

ಕಾಸರಗೋಡು: ವಿಶ್ವಹಿಂದೂ ಪರಿಷತ್ತಿನ ಕಾಸರಗೋಡು ಘಟಕ ಮತ್ತು ಸಾರ್ವಜನಿಕ ಶನೀಶ್ವರ ಪೂಜಾ ಸಮಿತಿಯ ಜಂಟಿ ಆಶ್ರಯದಲ್ಲಿ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮೊನ್ನೆ ಸಾಮೂಹಿಕ ಶನೈಶ್ಚರ ಪೂಜೆ ನೆರವೇರಿತು.

ಕಾರ್ಯಕ್ರಮದಲ್ಲಿ ಅಯೋಧ್ಯೆ ಶ್ರೀರಾಮ ಕ್ಷೇತ್ರದ ಪವಿತ್ರ ತೀರ್ಥ ಜಲವನ್ನೂ ವಿತರಿಸಲಾಯಿತು. ಆ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಸಮೂಹ ಪುನೀತರಾದರು.

ಕಾರ್ಯಕ್ರಮದಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಿ.ಹಿಂ.ಪ ನಗರಸಮಿತಿ ಅಧ್ಯಕ್ಷ ಕಮಲಾಕ್ಷ  ವಹಿಸಿದರು.   ಬಾಲಗೋಕುಲದ ಮಂಡಲ ಪ್ರಮುಖ್ ದೇವದಾಸ ನುಳ್ಳಿಪ್ಪಾಡಿಯಿಂದ ಪ್ರಧಾನ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು. ಮಾತೃಮಂಡಳಿ ಅಧ್ಯಕ್ಷೆ ಶ್ರೀದೇವಿ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಕೃಷ್ಣ ಹೊಳ್ಳ  ಕಾರ್ಯಕ್ರಮ ನಿರೂಪಿಸಿದರು. ಶ್ರೀವಲ್ಲಿ ಸ್ವಾಗತಿಸಿ, ಕಿರಣ್ ಅಣಂಗೂರು ವಂದಿಸಿದರು.  ನಂತರ ಅನ್ನ ಸಂತರ್ಪಣೆ ನಡೆಯಿತು.

RELATED NEWS

You cannot copy contents of this page