ಫೋನ್‌ನಲ್ಲಿ ಮಾತನಾಡುತ್ತಿದ್ದ ಯುವಕ ಕುಸಿದುಬಿದ್ದು ಮೃತ್ಯು

ಕಾಸರಗೋಡು: ಅಂಗಡಿಯಿಂದ ಸಾಮಗ್ರಿ ಖರೀ ದಿಸಲು ತಲು ಪಿದ ಯುವಕ ಫೋನ್‌ನಲ್ಲಿ ಮನೆಯವ ರೊಂದಿಗೆ ಮಾತನಾ ಡುತ್ತಿದ್ದಾಗ ಜನರ ಕಣ್ಮುಂದೆಯೇ  ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಪರಪ್ಪ ಪನ್ನಿಯೆರಿಞಿ ಕೊಲ್ಲಿ ಆಲಡಿತಟ್ಟ್ ಆರ್ಯಶ್ಶೇರಿಯ ಪ್ರಿನ್ಸ್ (38) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಪರಪ್ಪ ಪೇಟೆಯಲ್ಲಿ ಘಟನೆ ನಡೆದಿದೆ. ಕೂಡಲೇ  ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪ್ರಿನ್ಸ್ ಡಿಶ್ ಟಿವಿ ಆಪರೇಟರಾಗಿ ಕೆಲಸ ನಿರ್ವಹಿಸು ತ್ತಿದ್ದರು. ಆರ್ಯಶ್ಶೇರಿಯ ಥೋಮಸ್ ಯಾನೆ ಬಾಬು-ಮೇರಿ ಕುಟ್ಟಿ ದಂಪತಿಯ ಪುತ್ರನಾದ ಮೃತರು ಪತ್ನಿ ರಾಣಿ, ಸಹೋದರಿ ರಿನ್ಸಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

You cannot copy contents of this page