ವರದಕ್ಷಿಣೆಗಾಗಿ ಕಿರುಕುಳ :ಪತಿ ಸಹಿತ ಮೂವರ ವಿರುದ್ಧ ಕೇಸು

ಕುಂಬಳೆ: ವರದಕ್ಷಿಣೆಗಾಗಿ ಒತ್ತಾಯಿಸಿ ಕಿರುಕುಳ ನೀಡುತ್ತಿರುವು ದಾಗಿ ಆರೋಪಿಸಿ ಯುವತಿ ನೀಡಿದ ದೂರಿನಂತೆ ಪತಿ ಹಾಗೂ ಆತನ ಇಬ್ಬರು ಸಹೋದರಿಯರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮಂಗಲ್ಪಾಡಿ ಕುಬಣೂರಿನ ಚಂದ್ರಶೇಖರ ಎಂಬಾತನ ಪತ್ನಿ ರೇವತಿ (42) ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಚಂದ್ರಶೇಖರ ಹಾಗೂ ರೇವತಿಯ ಮದುವೆ20 ವರ್ಷಗಳ ಹಿಂದೆ ನಡೆದಿತ್ತು. ಇವರಿಗೆ 18 ಹಾಗೂ 13ರ ಹರೆಯದ ಇಬ್ಬರು ಮಕ್ಕಳಿದ್ದಾರೆ. ಇದೀಗ ವರದಕ್ಷಿಣೆಗಾಗಿ ಒತ್ತಾಯಿಸಿ ಪತಿ ಚಂದ್ರಶೇಖರ ಹಾಗೂ ಆತನ ಇಬ್ಬರು ಸಹೋದರಿಯರು ಶಾರೀರಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ  ರೇವತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು.

RELATED NEWS

You cannot copy contents of this page