ಚರಂಡಿ ಅವ್ಯವಸ್ಥೆ: ಮೊಗ್ರಾಲ್ ನಾಂಗಿ ಪ್ರದೇಶದಲ್ಲಿ ನೀರು ತುಂಬಿಕೊಂಡು ಸಮಸ್ಯೆ

ಮೊಗ್ರಾಲ್: ಮೊಗ್ರಾಲ್ ನಾಂಗಿ ಕಡಪ್ಪುರದಲ್ಲಿ ವ್ಯವಸ್ಥಿತವಾದ ಚರಂಡಿಯಿಲ್ಲದಿರುವುದು ಇಲ್ಲಿನ ನಿವಾಸಿಗಳಿಗೆ ಸಮಸ್ಯೆಯಾಗಿ ಕಾಡತೊಡಗಿದೆ. ಚರಂಡಿಯ ಒಂದು ಭಾಗ ಮಣ್ಣು ತುಂಬಿಕೊಂಡಿದ್ದು, ಇದರಿಂದ ನೀರು ಹರಿದು ಹೋಗಲು ಸಮಸ್ಯೆ ಉಂಟಾಗಿದೆ. ಇದರಿಂದ ಮಳೆ ಸುರಿಯುವ ವೇಳೆ ಈ ಭಾಗದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಇದರಿಂದ ಚರಂಡಿಯಲ್ಲಿ ನೀರು ಹರಿದು ಹೋಗುತ್ತಿಲ್ಲ. ಮಾತ್ರವಲ್ಲದೆ ಕಡಪ್ಪುರ ಭಾಗದಿಂದ ರೈಲ್ವೇ ಸುರಂಗದ ಮೂಲಕ ನೀರು ಹರಿದು ಬರುವುದೇ ಇಲ್ಲಿ ಜಲಾವೃತಗೊಳ್ಳಲು ಕಾರಣವಾಗಿದೆ. ಚರಂಡಿ ಸೌಕರ್ಯವಿಲ್ಲದುದರಿಂದ ನೀರು ಹರಿದು ಹೋಗದೆ ಅಲ್ಲಿಯೇ ಕಟ್ಟಿ ನಿಲ್ಲುತ್ತಿದೆ. ಕಳೆದೆರಡು ದಶಕಗಳಿಂದ ಇಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಮನೆಗಳಿಗೆ ನೀರು  ಸೇರುತ್ತಿರುವುದು, ಕುಡಿಯುವ ನೀರು ಮಲಿನಗೊಳ್ಳುತ್ತಿದೆ. ಇದರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಮುಂದಿರಿಸಿದರೂ ಪ್ರಯೋಜನವಾಗಿಲ್ಲವೆಂದು ಇಲ್ಲಿನ ಜನತೆ ತಿಳಿಸುತ್ತಿದ್ದಾರೆ.

RELATED NEWS

You cannot copy contents of this page