ಬೇಕಲ ನಿವಾಸಿ ಯುವಕ ಕುವೈತ್ನಲ್ಲಿ ನಿಧನ
ಕಾಸರಗೋಡು: ಬೇಕಲ ನಿವಾಸಿಯಾದ ಯುವಕ ಕುವೈಟ್ನಲ್ಲಿ ಹೃದಯಾಘಾತ ದಿಂದ ಮೃತ ಪಟ್ಟನು. ಬೇಕಲ ಮಸ್ತಿಗುಡ ಎಂಬಲ್ಲಿನ ಹಮೀದ್ರ ಪುತ್ರ ಅರಫಾತ್ (36) ಮೃತ ಯುವಕ. ಮೃತರು ತಾಯಿ ಅವ್ವಾಬಿ, ಪತ್ನಿ ಮಶೂರ ಆಲಂಪಾಡಿ, ಮಕ್ಕಳಾದ ಸಯಾನ್, ಈಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಮೃತದೇಹವನ್ನು ಇಂದು ಊರಿಗೆ ತಲುಪಿಸಿ ಬೇಕಲ ಹೈದ್ರೋಸ್ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.