ಕೆರೆ ಕುಸಿದು ಪಂಪ್‌ಶೆಡ್ ನಾಶ

ಉಪ್ಪಳ: ವ್ಯಾಪಕ ಮಳೆಗೆ ಕೆರೆ ಜರಿದು ಬಿದ್ದು ಪರಿಸರದಲ್ಲಿದ್ದ ಪಂಪ್ ಶೆಡ್ಡ್ ಪೂರ್ತಿ ನೀರಲ್ಲಿ ಮುಳುಗಿ ನಾಶಗೊಂಡ ಘಟನೆ ನಡೆದಿದೆ. ಹೇರೂರು ಚಾಕಟೆದಡಿ ನಿವಾಸಿ ಬೀಡಿ ಗುತ್ತಿಗೆದಾರ ಧರ್ಮರಾಜ್‌ರ ಕೆರೆ ಶನಿವಾರ ರಾತ್ರಿ ಜರಿದು ಬಿದ್ದು ಸಮೀಪವಿರುವ ಮೋಟಾರ್ ಪಂಪ್, ವಿದ್ಯುತ್ ಮೀಟರ್ ಸಹಿತ ಶೆಡ್ಡ್ ಕೆರೆಯ ನೀರಿಗೆ ಬಿದ್ದು ಪೂರ್ತಿ ನಾಶಗೊಂಡಿದೆ. ಸುಮಾರು ಒಂದೂವರೆ ಲಕ್ಷ ರೂ ನಷ್ಟ ಸಂಭವಿಸಿರುವುದಾಗಿ ತಿಳಿಸಿದ್ದಾರೆ. ಈ ಪರಿಸರದ ತೋಡಿನಲ್ಲಿ ನೀರು ಉಕ್ಕಿ ಹರಿದ ಪರಿಣಾಮವಾಗಿ ಕೆರೆ ಜರಿದು ಬೀಳಲು ಕಾರಣವೆಂದು ತಿಳಿಸಿದ್ದಾರೆ.

RELATED NEWS

You cannot copy contents of this page