ಕುಂಬಳೆ: ಬಿ.ಎಂ ಎಸ್ ಕುಂಬಳೆ ಪಂಚಾಯತ್ ಸಮ್ಮೇಳನ ಕುಂಬಳೆ ಜಯಮಾರುತಿ ವ್ಯಾಯಾಮ ಶಾಲೆಯಲ್ಲಿ ಜರಗಿತು. ಶಿವಾನಂದರಾವ್ ಅಧ್ಯಕ್ಷತೆ ವಹಿಸಿದರು. ಎನ್.ಜಿ.ಒ ಸಂಘ್ ಜಿಲ್ಲಾ ಅಧ್ಯಕ್ಷ ರಂಜಿತ್ ದೀಪ ಬೆಳಗಿಸಿ ಉದ್ಘಾಟಿಸಿದರು. ಜಿಲ್ಲಾ ಜತೆಕಾರ್ಯ ದರ್ಶಿ ದಿನೇಶ್ ಬಂಬ್ರಾಣ, ಶೋಭಾ ಬಾಲರಾಜ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಕಾರ್ಯವಾಹ ಜಿತೇಶ್ ನಾಯ್ಕಾಪು, ಬಿಜೆಪಿ ರಾಜ್ಯ ಸದಸ್ಯ ವಿ. ರವೀಂದ್ರನ್ ಶುಭಾಶಂಸನೆಗೈದರು. ಭೋಜರಾಜ ದಂಡೆಗೋಳಿ ವರದಿ ಮಂಡಿಸಿದರು. ಬಿಜೆಪಿ ಪಂಚಾಯತ್ ಸದಸ್ಯರಾದ ಕಾಂಚಾರ, ರಮೇಶ್ ಭಟ್, ಅಜಿತ್ ಕುಮಾರ್, ದಿನೇಶ್ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಭಾಗವಹಿಸಿದರು. ನೂತನ ಸಮಿತಿಗೆ ಪದಾ ಧಿಕಾರಿಗಳನ್ನು ಆಯ್ಕೆ ಮಾಡಲÁ ಯಿತು. ಅಧ್ಯಕ್ಷರಾಗಿ ಶಿವಾನಂದರಾವ್, ಕಾರ್ಯದರ್ಶಿಯಾಗಿ ರವಿರಾಜ್, ಕೋಶಾಧಿಕಾರಿಯಾಗಿ ದಿವಾಕರ ರೈ ಆಯ್ಕೆಯಾದರು. ದಿವಾಕರ ರೈ ಸ್ವಾಗತಿಸಿ, ಐತ್ತಪ್ಪ ನಾರಾಯಣ ಮಂಗಲ ವಂದಿಸಿದರು.






