ಮನೆಗಳ ಮೇಲೆ ಗುಡ್ಡೆ ಕುಸಿದು ಮೂವರು ದಾರುಣ ಮೃತ್ಯು; ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು: ಮಂಗಳೂರು ಕಂಕನಾಡಿ ಗರೋಡಿ ಎಂಬಲ್ಲಿ ಇಂದು ಮುಂಜಾನೆ ದಾರುಣ ಘಟನೆ

ಮಂಗಳೂರು: ಧಾರಾಕಾರ ಮಳೆ ಸುರಿಯುತ್ತಿದ್ದಂತೆ  ಗುಡ್ಡೆ ಕುಸಿದು ಮನೆಗಳ ಮೇಲೆ ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ ಮೂರು ಮಂದಿ ಮೃತಪಟ್ಟ ಘಟನೆ ಕಂಕನಾಡಿ ನಾಗುರಿ ಬಳಿಯ ಗರೋಡಿ ಎಂಬಲ್ಲಿ ನಡೆದಿದೆ.  ಬಿಹಾರ ನಿವಾಸಿಗಳಾದ ಲಾಲ್ ಬಾಬು ಎಂಬವರ ಮಕ್ಕಳಾದ ಚೌರಸ್ಯ (8), ಪ್ಯಾರಿ (4), ನೆರೆಮನೆ ನಿವಾಸಿ  ಬಾಲಕೃಷ್ಣ ಎಂಬವರ ಪತ್ನಿ ಶಾಂತ (40) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಇಂದು ಮುಂಜಾನೆ 5 ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ. ಬಿಹಾರ ನಿವಾಸಿಗಳಾದ ಕುಟುಂಬಗಳು ವಾಸಿಸುವ ಎರಡು ಮನೆಗಳ ಮೇಲೆ ಗುಡ್ಡೆ ಕುಸಿದು ಬಿದ್ದಿದೆ. ಇದರಿಂದ  ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಬಿಹಾರ ನಿವಾಸಿಯಾದ ಲಾಲ್ ಬಾಬುರ ಕುಟುಂಬ 8 ವರ್ಷಗಳಿಂದ ಗರೋಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ. ಗೋಡೆ ಕುಸಿದು ಲಾಲ್‌ಬಾಬು, ಪತ್ನಿ ಇಂದು, ಮಕ್ಕಳಾದ ಅಲ್ಖ (14), ಅನಾಮಿಕ ಚೌರಸ್ಯ (8), ಪ್ಯಾರಿ (4) ಎಂಬಿವರು ನಿದ್ರಿಸಿದ್ದ ಮನೆಯ ಮೇಲೆ ಗುಡ್ಡೆ ಕುಸಿದು ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ತಲುಪಿದ ರಕ್ಷಣಾ ಕಾರ್ಯಕರ್ತರು ಮನೆಯ  ಅವಶಿಷ್ಟಗಳಡಿಯಲ್ಲಿ ಸಿಲುಕಿದವರನ್ನು ಹೊರತೆಗೆದಿದ್ದರೂ  ಇಬ್ಬರು ಮಕ್ಕಳ ಜೀವ ರಕ್ಷಿಸಲಾಗಲಿಲ್ಲ. ಇಲ್ಲೇ ಸಮೀಪದ ಮನೆಯಲ್ಲಿ ವಾಸಿಸುವ ಬಾಲಕೃಷ್ಣರ ಪತ್ನಿ ಶಾಂತ ಎಂಬವರು ಕೂಡಾ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬಾಲಕೃಷ್ಣರನ್ನು ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ.

RELATED NEWS

You cannot copy contents of this page