ಅಪರಿಮಿತ ವೇಗದಲ್ಲಿ ತಲುಪಿದ ಕಾರು ಢಿಕ್ಕಿ ಹೊಡೆದಿದ್ದ ಪ್ಲಸ್ ಟು ವಿದ್ಯಾರ್ಥಿನಿ ಮೃತ್ಯು: ಮುಳ್ಳೇರಿಯದಲ್ಲಿ ಶೋಕಸಾಗರ

ಮುಳ್ಳೇರಿಯ: ಅಪರಿಮಿತ ವೇಗದಲ್ಲಿ ಸಂಚರಿಸಿದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಪ್ಲಸ್‌ಟು ವಿದ್ಯಾರ್ಥಿನಿ ಮೃತಪಟ್ಟಳು. ಮುಳ್ಳೇರಿಯ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿನಿ ದೀಕ್ಷ (17) ನಿನ್ನೆ ಮಧ್ಯಾಹ್ನ ೨ ಗಂಟೆ ವೇಳೆ ಮೃತಪಟ್ಟಿದ್ದಾಳೆ. ಇಂದು ಬೆಳಿಗ್ಗೆ ಮುಳ್ಳೇರಿಯ ಶಾಲೆಯಲ್ಲಿ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಮುಳ್ಳೇರಿಯ ವಿವೇಕಾನಂದ ನಗರದ ಮನೆ ಬಳಿ ಅಂತ್ಯ ಸಂಸ್ಕಾರ ನಡೆಸಲಾಯಿತು. ವಿವೇಕಾನಂದ ನಗರ ನಿವಾಸಿ ಹಾಗೂ ಮುಳ್ಳೇರಿಯ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಡುಗೆ ಕಾರ್ಮಿಕನಾಗಿರುವ ಬಿ. ಕೃಷ್ಣ- ರಾಧಾಮಣಿ ದಂಪತಿ ಪುತ್ರಿಯಾದ ದೀಕ್ಷ ಸಹೋದರ ದೀಪಕ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾಳೆ.

ಕಳೆದ ತಿಂಗಳ 23ರಂದು ಸಂಜೆ 4 ಗಂಟೆ ವೇಳೆ ಮುಳ್ಳೇರಿಯ ಗಜಾನನ ಎಲ್‌ಪಿ ಶಾಲೆ ಬಳಿ ಕುಂಬಳೆ ಮುಳ್ಳೇರಿಯ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ನೆರೆಮನೆ ನಿವಾಸಿಯಾದ ಶ್ರೀಯಾನ್ (4) ಎಂಬ ಮಗುವನ್ನು ಶಾಲೆಯಿಂದ ಕರೆದುಕೊಂಡು ಮನೆಯತ್ತ ತೆರಳುತ್ತಿರುವ ಮಧ್ಯೆ ಅಪರಿಮಿತ ವೇಗದಿಂದ ತಲುಪಿದ ಕಾರು ಇವರಿಬ್ಬರಿಗೆ ಢಿಕ್ಕಿ ಹೊಡೆ ದಿದೆ.  ಕೂಡಲೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಗಾಯ ಗೊಂಡ ಶ್ರೀಯಾನ್ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ವಿಭಾಗದಲ್ಲಿ ಚಿಕಿತ್ಸೆಯಲ್ಲಿ ದ್ದಾನೆ. ದೀಕ್ಷಾಳ ಮರಣದಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಮುಳ್ಳೇರಿಯ ಪೇಟೆ ಶೋP ಮುಖವಾಗಿದೆ.

RELATED NEWS

You cannot copy contents of this page