ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ: ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಗೆ ಹೊಸ ಬಂದೂಕುಗಳ ಪೂರೈಕೆ

ಕಾಸರಗೋಡು: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವಂತೆಯೇ ಅವುಗಳನ್ನು ಕಾಡಿಗಟ್ಟುವ ಕಾರ್ಯಾಚರಣೆಗಾಗಿ ಕಾಸರಗೋಡು ಅರಣ್ಯ ಕಚೇರಿಗೆ ಮೂರು ಹೊಸ ಬಂದೂಕುಗಳನ್ನು ಪೂರೈಸಲಾಗಿದೆ.

ಕಾಡಾನೆಗಳನ್ನು ಕಾಡಿಗಟ್ಟಲು ಬಳಸಲಾಗುವ 12 ಬೋರ್ ಪಂಪ್ ಆಕ್ಷನ್ ಕೋವಿಗಳನ್ನು  ಇದಕ್ಕಾಗಿ ಕಾನ್‌ಪುರದಿಂದ ತುರ್ತಾಗಿ ಖರೀದಿಸ ಲಾಗಿದೆ. ಇಂತಹ ಬಂದೂಕು ಬಳಸಿ ದೂರದಿಂದಲೇ ಗುಂಡು ಹಾರಿಸಿ ಕಾಡಾನೆ ಗಳನ್ನು ಕಾಡಿಗಟ್ಟಲು  ಸಾಧ್ಯವಾಗಲಿದೆ. ಮಾತ್ರವಲ್ಲದೆ ಅದರಿಂದ ಅರಣ್ಯ ಪಾಲಕರ ಪ್ರಾಣ ರಕ್ಷಣೆಯನ್ನು ಖಾತರಿಪಡಿಸಬ ಹುದಾಗಿದೆ. ಈ ಬಂದೂಕುಗಳಿಗೆ ಕಿರು ಗಾತ್ರದ ಬುಲ್ಲೆಟ್‌ಗಳಲ್ಲಿ ಬಳಸಲಾಗುತ್ತಿದೆ. ಆನೆಗಳು ಗಾಯಗೊಳ್ಳದಂತೆ ಅದು ಇರುವ ೫೦ ಮೀಟರ್ ದೂರದಿಂದ ಬಂದೂಕು ಬಳಸಿ ಗುಂಡು ಹಾರಿಸಲಾಗುವುದು. ಈ ಹಿಂದೆ ಕಾಸರಗೋಡು ಅರಣ್ಯ ಕಚೇರಿಗೆ ಇಂತಹ ಒಂದು ಬಂದೂಕನ್ನು ಮಾತ್ರವೇ  ನೀಡಲಾಗಿತ್ತು. ಇದರ ಹೊರತಾಗಿ ಈಗ ಲಕ್ಷಾಂತರ ರೂ. ವ್ಯಯಿಸಿ ಈ ಹೊಸ ಮೂರು ಬಂದೂಕುಗಳನ್ನು ಕಾನಾಪುರದಿಂದ ಖರೀದಿಸಲಾಗಿದೆ.

 ಜನವಾಸ ಪ್ರದೇಶಗಳಿಗೆ ಇಳಿಯುವ ಕಾಡಾನೆಗಳನ್ನು ಕಾಡಿಗಟ್ಟಲು ಅಗತ್ಯದ ಸೌಕರ್ಯ ಗಳಿಲ್ಲದೆ ಒದ್ದಾಡುತ್ತಿರುವ ಅರಣ್ಯ ಪಾಲಕರಿಗೆ ಈ ಹೊಸ ಬಂದೂಕುಗಳು ಒಂದು ಅನುಗ್ರಹವಾಗಿ ಮಾರ್ಪಟ್ಟಿದೆ. ವನ್ಯಜೀವಿಗಳ ದಾಳಿಯಿಂದ ಅರಣ್ಯಪಾ ಲಕರು ತಮ್ಮ ಸ್ವಯಂ ರಕ್ಷಣೆಗಾಗಿಯೂ ಇದನ್ನು ಬಳಸಬಹುದಾಗಿದೆ.

Leave a Reply

Your email address will not be published. Required fields are marked *

You cannot copy content of this page