ಬಾಲಕಿಗೆ ಕಿರುಕುಳ ಯತ್ನ: ಟ್ಯಾಪಿಂಗ್ ಕಾರ್ಮಿಕ ಬಂಧನ
ಕಾಸರಗೋಡು: ಸಂಬಂಧಿಕರ ಮನೆಗೆ ತಲುಪಿದ ೯ರ ಹರೆಯದ ಬಾಲಕಿಗೆ ಕಿರುಕುಳ ನೀಡಲೆತ್ನಿಸಿದ ಪ್ರಕರಣದಲ್ಲಿ ಟ್ಯಾಪಿಂಗ್ ಕಾರ್ಮಿ ಕನನ್ನು ಬಂಧಿಸಲಾಗಿದೆ. ಎಣ್ಣಪ್ಪಾರ ಪನೆಯಾರ್‌ಕುನ್ನು ಮಣ್ಣಾರಯಿಲ್ ಹೌಸ್‌ನ ಎಂ.ಕೆ. ಜೋನ್ ಯಾನೆ ತಂಗಚ್ಚನ್ (62) ಎಂಬಾತನನ್ನು ಪೋಕ್ಸೋ ಪ್ರಕರಣದಲ್ಲಿ ಬೇಕಲ ಡಿವೈಎಸ್‌ಪಿ ವಿ.ವಿ. ಮನೋಜ್ ಬಂಧಿಸಿದ್ದಾರೆ. ಜುಲೈ 21ರಂದು ಘಟನೆ ನಡೆದಿದೆ. ಬಾಲಕಿಯ ದೂರಿನಂತೆ ಆರೋಪಿಯ ಹೆಸರಲ್ಲಿ ಪೋಕ್ಸೋ ಕಾಯ್ದೆ ಪ್ರಕಾರ ಕೇಸು ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದ ಆರೋಪಿಗೆ 2 ವಾರಗಳ ರಿಮಾಂಡ್ ವಿಧಿಸಲಾಗಿದೆ.