ಕಾಲ್ನಡೆ ಪ್ರಯಾಣಿಕರಿಗೆ ಕೆಸರು ನೀರಿನ ಅಭಿಷೇಕ: ಬಸ್ ತಡೆದು ಚಾಲಕನಿಗೆ ತಾಕೀತು
ಕುಂಬಳೆ: ಮೊಗ್ರಾಲ್‌ನಿಂದ ಅಪರಿಮಿತ ವೇಗದಲ್ಲಿ ಸಂಚರಿಸಿದ ಖಾಸಗಿ ಬಸ್‌ನ್ನು ಬೆನ್ನಟ್ಟಿ ದ್ವಿಚಕ್ರ ಸವಾರರು ತಾಕೀತು ನೀಡಿದ ಘಟನೆ ಮಾವಿನಕಟ್ಟೆಯಲ್ಲಿ ನಡೆದಿದೆ. ಸ್ಟಾಫ್‌ನಲ್ಲಿ ಬಸ್ ನಿಲ್ಲಿಸದೆ ವೇಗವಾಗಿ ಸಾಗಿದ ಬಸ್ ಕಾಲ್ನಡೆ ಪ್ರಯಾಣಿಕರಿಗೆ ಕೆಸರು ನೀರಿನ ಅಭಿಷೇಕವನ್ನು ಮಾಡಿತ್ತೆಂದು ದೂರಲಾಗಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿದ್ದು ಈ ನೀರಲ್ಲಿ ವೇಗವಾಗಿ ಬಸ್ ಸಾಗಿದಾಗ ಶಾಲೆಗೆ ತೆರಳುವ ವಿದ್ಯಾರ್ಥಿಗಳು, ಮಸೀದಿಗೆ ತೆರಳುವವರೆಲ್ಲರಿಗೂ ಕೆಸರು ನೀರಿನ ಸಿಂಚನವಾಗಿದೆ. ಆದರೂ ಬಸ್ ಮತ್ತೆ ಅದೇ ಸ್ಥಿತಿ ಮುಂದುವರಿಸಿದಾಗ ಬೈಕ್‌ನಲ್ಲಿ ಬೆನ್ನಟ್ಟಿ ಚಾಲಕನಿಗೆ ತಾಕೀತು ನೀಡಿದ್ದಾರೆ. ಕಾಸರಗೋಡಿನಿಂದ ತಲಪಾಡಿಗೆ ಬಸ್ ಸಂಚರಿಸುತ್ತಿತ್ತು.