ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಾಂಜಾ ಕೃಷಿ ಪತ್ತೆ

ಕಾಸರಗೋಡು: ಕಾಞಂ ಗಾಡ್ ಬಳಿಯ ಪಡನ್ನಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬದಿ ಗಾಂಜಾ ಕೃಷಿ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಾಲ್ಕು ಗಾಂಜಾ ಗಿಡಗಳನ್ನು ಹೊಸದುರ್ಗ ಡಿವೈಎಸ್‌ಪಿ ಬಾಬು ಪೆರಿಂಙೋತ್ ಪತ್ತೆ ಹಚ್ಚಿದ್ದಾರೆ. ಗಿಡಗಳ ಗುಣಮಟ್ಟ ತಿಳಿಯುವ ಉದೆಶದಿಂದ ಅವುಗಳನ್ನು  ಲ್ಯಾಬ್‌ಗೆ ಕಳು ಹಿಸಿಕೊಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಾಂಜಾ ಗಿಡಗಳನ್ನು ನೆಟ್ಟವರು ಯಾರು ಎಂಬ ಬಗ್ಗೆ ತಿಳಿಯಲು ತನಿಖೆ ಆರಂಭಿಸಲಾಗಿದೆ.

You cannot copy contents of this page