ಮಾರ್ಪನಡ್ಕ: ಕುಂಬ್ಡಾಜೆ ತಲೆಬೈಲುನಲ್ಲಿ ಕೋಳಿ ಅಂಕ ನಡೆಸುತ್ತಿದ್ದ ೫ ಮಂದಿಯನ್ನು ಬಂಧಿಸಲಾಗಿದೆ. ಸ್ಥಳದಿಂದ 2600 ರೂ. ಹಾಗೂ ೫ ಹುಂಜ ಕೋಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಲೆಬೈಲುನ ಜಯಕರ ಟಿ. (63), ಗಾಡಿಗುಡ್ಡೆಯ ಅಪ್ಪಕುಂಞಿ (55), ನಾರಂಪಾಡಿಯ ಗೋಪಾಲ (60), ಪೆರಡಾಲ ವಳಮಲೆಯ ಬಿ. ಪ್ರಸನ್ನ (33), ಚಂದ್ರಶೇಖರ (39) ಎಂಬಿವರನ್ನು ಬದಿಯಡ್ಕ ಎಸ್‌ಐ ಟಿ. ಸುನಿಲ್ ಕುಮಾರ್ ಹಾಗೂ ತಂಡ ಬಂಧಿಸಿರುವುದು. ನಿನ್ನೆ ಸಂಜೆ ೪.೪೫ರ ವೇಳೆಗೆ ತಲೆಬೈಲ್‌ನ ಕೋಳಿ ಅಂಕ ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದರು.






