ಧರ್ಮನಿಷ್ಠೆ ಕೌಸಲ್ಯೆ

ಕೌಸಲ್ಯೆ ಅವತಾರ ಪುರುಷ ಶ್ರೀ ರಾಮನ ತಾಯಿ ಎಂಬುದರಿಂದ ಮಾತ್ರವಲ್ಲ ರಾಮಾಯಣದಲ್ಲಿ ಪ್ರಮುಖ ಪಾತ್ರವಾಗಿರುವುದು. ಧರ್ಮ ನಿಷ್ಠೆ, ಪ್ರಾಮಾಣಿಕತೆ, ಕುಟುಂಬ ಪ್ರೇಮ ಮೊದಲಾದವುಗಳಿಂದಲೂ ಕೌಸಲ್ಯೆ ಮಹಾತಾಯಿಯಾಗಿದ್ದಾಳೆ. ರಾಮಾಯಣದಲ್ಲಿ ಮಹಿಳೆಯರಿಗೆ ಮಹತ್ವದ ಸ್ಥಾನವಿದೆ. ಹೆಚ್ಚೇಕೆ ರಾಮಾಯಣಕ್ಕೆ ಕಾರಣವು ಕೂಡಾ ಮಹಿಳೆಯರೇ ಎಂಬುದು ನಿಸ್ಸಂಶಯ. ಪಂಚ ಪತಿವ್ರತೆಯರಲ್ಲಿ ನಾಲ್ಕು ಮಂದಿ ಕೂಡಾ ರಾಮಾಯಣದಲ್ಲಿ ಕಂಡು ಬರುತ್ತಾರೆ. ಅಹಲ್ಯೆ, ಸೀತೆ, ತಾರೆ, ಮಂ ಡೋದರಿ ಎಂಬವರು ಈ ನಾಲ್ಕು ಮಂದಿಯಾಗಿದ್ದಾರೆ.

ಕೋಸಲ ದೇಶದ ರಾಜ ಸುಕೌಶಲನ ಪುತ್ರಿಯಾದ ಕೌಸಲ್ಯೆಯನ್ನು ದಶರಥ ವಿವಾಹವಾಗುವಾಗ ಅಯೋ ಧ್ಯೆಯಲ್ಲಿ ತನ್ನ ಮಗಳು ರಾಣಿಯಂತೆ ಸುಖದ ಸುಪ್ಪತ್ತಿಗೆಯಲ್ಲಿ ಜೀವಿಸುವಳೆಂಬ ಮಹತ್ವಾಕಾಂಕ್ಷೆಯಿಂದ ಆಕೆಯನ್ನು ದಶರಥನಿಗೆ ವಿವಾಹ ಮಾಡಿಕೊಡಲಾ ಗಿದೆ. ಆದರೆ ಕೌಸಲ್ಯೆಯ ಬದಕು ಅಷ್ಟು ಸಂತೋಷಪೂರ್ಣವಾಗಿರಲಿಲ್ಲ ಎಂಬುದು ನಮಗೆ ತಿಳಿದುಬರುತ್ತದೆ. ಯಾವುದೇ ಮಹಿಳೆ ಏನನ್ನು ಬೇಕಿದ್ದರೂ ಹಂಚಿಕೊಂಡಾಳು. ಆದರೆ ತನ್ನ ಗಂಡನಲ್ಲಿ ಇನ್ನೋರ್ವೆಗೆ ಅಧಿಕಾರ ಚಲಾಯಿಸುವಂತಹ ಹಕ್ಕನ್ನು ಯಾರೂ ನೀಡಲಾರರು. ಆದರೆ ಅನಿ ವಾರ್ಯವಾಗಿ ಕೌಸಲ್ಯೆಗೆ ಅದಕ್ಕೂ ಶರಣಾಗಬೇಕಾಯಿತು. ತನಗೆ ಪುತ್ರ ಸಂತಾನ ಉಂಟಾಗುವುದಿಲ್ಲ ಎಂಬ ಕೊರಗು ಒಂದು ಕಡೆಯಾದರೆ ರಾಜ್ಯಕ್ಕೆ ಉತ್ತರಾಧಿಕಾರಿ ಬೇಕೆಂಬ ಆಕಾಂಕ್ಷೆ ಯಿಂದ ದಶರಥ ಇನ್ನೊಂದು ವಿವಾಹಕ್ಕೆ ಸಿದ್ಧನಾಗುವಾಗ ತಡೆಯಲು ಸಾಧ್ಯವಾಗ ಲಿಲ್ಲ. ಆದರೆ ಸವತಿಯರಾಗಿ ಬಂದ ಕೈಕೇಯಿ ಹಾಗೂ ಸುಮಿತ್ರೆಯರನ್ನು ಕೌಸಲ್ಯೆ ತನ್ನ ಸ್ವಂತ ಸಹೋದರಿಯರಂತೆ ನೋಡಿಕೊಂಡಿರುವುದು ಕೌಸಲ್ಯೆಯ ಕುಟುಂಬ ಪ್ರೇಮಕ್ಕೆ ಉದಾಹರಣೆ ಯಾಗಿದೆ. ದಿನವೂ ಸವತಿಯರಲ್ಲಿ ಮತ್ಸರ, ಸ್ಪರ್ಧೆಗೆ ನಿಂತಿದ್ದರೆ ಅಯೋಧ್ಯೆ ಯಲ್ಲಿ ಇನ್ನೊಂದು ರಾಮಾಯಣವೇ ಉಂಟಾಗುತ್ತಿತ್ತು. ಆದರೆ ಅದಕ್ಕೆ ಆಸ್ಪದ ನೀಡದೆ ಎಲ್ಲರನ್ನು ಸಮಾನಾಗಿ ಕಂಡು ಹಿರಿಯಾಕೆ ಎಂಬ ಹುದ್ದೆಯನ್ನು ಕೌಸಲ್ಯ ಸುಸೂತ್ರವಾಗಿ ನಿಭಾಯಿಸಿದ್ದಾಳೆ.

ತನಗೆ ಹುಟ್ಟಿದ ಮಗಳನ್ನು ಇನ್ನೋರ್ವರಿಗೆ ದತ್ತು ನೀಡಬೇಕಾಗಿ ಬರುವುದು ಕೂಡಾ ಯಾವುದೇ ಮಹಿಳೆಯು ಒಪ್ಪುವ ವಿಷಯವಲ್ಲ. ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನು ತಂದೆ ತಾಯಿಯರೇ ನೋಡಿಕೊಳ್ಳುವುದಕ್ಕೆ ಇಷ್ಟ ಪಡುತ್ತಾರೆ. ಆದರೆ ಆ ವಿಷಯ ದಲ್ಲೂ ಕೌಸಲ್ಯೆಗೆ ದುರಾದೃಷ್ಟವೇ ಎನ್ನಬೇಕು. ತನ್ನ ಪುತ್ರಿಯನ್ನು ಸಹೋದರಿ ವರ್ಷಿಣಿಗೆ ನೀಡಬೇಕಾಗಿ ಬಂದುದಕ್ಕೆ ತನ್ನೊಳಗೆ ಕೊರಗ ಬೇಕಾಯಿತಲ್ಲದೆ ಅದನ್ನು ತಡೆಯುವ ಮನಸ್ಸು ಮಾಡಲಿಲ್ಲ. ರೋಮಪಾದ ಹಾಗೂ ವರ್ಷಿಣಿ ದಂಪತಿಗೆ ಮಕ್ಕಳಿಲ್ಲ ವೆಂಬ ಕಾರಣದಿಂದ ದಶರಥ-ಕೌಸಲ್ಯೆ ದಂಪತಿಯ ಪುತ್ರಿ ಶಾಂತಾಳನ್ನು ದತ್ತಾಗಿ ರೋಮಪಾದನಿಗೆ ನೀಡಿದರು. ಶಾಂತಾ ಅಯೋಧ್ಯೆಯ ಐಶ್ವರ್ಯವಾಗಿದ್ದಳು. ವೇದ ವೇದಾಂತ ಕಲಿತವಳು. ಗಂಡಲ್ಲದಿದ್ದರೂ ಅಯೋಧ್ಯೆಯ ರಾಜ್ಯಭಾರಕ್ಕೆ ಆಕೆಗೆ ಸಾಮರ್ಥ್ಯವಿತ್ತು. ಸಕಲ ಗುಣ ಸಂಪನ್ನೆಯಾದ ಈಕೆ ಸಕಲ ಕಲೆಗಳನ್ನು ಪಾರಂಗತ ಮಾಡಿಕೊಂ ಡಿದ್ದಳು. ಆದರೇನು ಮಾಡುವುದು ಆಕೆಗೆ ಅಯೋಧ್ಯೆಯಲ್ಲಿ ನಿಲ್ಲುವ ಯೋಗ ವಿರಲಿಲ್ಲ. ರೋಮಪಾದ ತನ್ನ ರಾಜ್ಯಕ್ಕೆ ಕರೆದುಕೊಂಡು ಹೋದ. ಅಂದಿನಿಂದ ಶಾಂತಾ ಹಾಗೂ ಆಕೆಯ ಹೆತ್ತವರ ಮಧ್ಯೆಗಿನ ಸಂಪರ್ಕವೇ ಕಡಿದು ಹೋ ಯಿತು. ಶಾಂತಾ ಯುವತಿಯಾದಾಗ ರೋಮಪಾದ ಆಕೆಯನ್ನು ಮಹರ್ಷಿ ಯೋರ್ವರಿಗೆ ವಿವಾಹ ಮಾಡಿ ಕೊಟ್ಟನು. ರಾಜ ಕುಲದಲ್ಲಿ ಹುಟ್ಟಿದ ಮಹಿಳೆಯೋರ್ವಳು ಕಾಡಿನಲ್ಲಿ ನಾರು ಮಡಿಯುಟ್ಟು ಜೀವಿಸಬೇಕಾದ ಸನ್ನಿವೇಶ ಸೃಷ್ಟಿಯಾಯಿತು. ರಾಜನ ಅರಮನೆ ಯಲ್ಲಿ ಸಕಲ ಸುಖಗಳನ್ನು ಪಡೆಯ ಬೇಕಾಗಿದ್ದ ಶಾಂತಾ ಮಹರ್ಷಿಯ ಪತ್ನಿಯಾಗಿ ಕಾಡಿನಲ್ಲಿ ಬದುಕು ಸವೆಸಬೇಕಾದ ಸ್ಥಿತಿಯನ್ನು ನೆನೆದು ಕೌಸಲ್ಯೆಯ ಮನಸ್ಸು ಮತ್ತಷ್ಟು ಮರುಗಿತು. ಆದರೆ ದತ್ತು ಕೊಟ್ಟ ಬಳಿಕ ಆ ಬಗ್ಗೆ ಮಾತಾನಾಡಲು ತಾನೆ ಏನು ಅರ್ಹತೆ? ಎಲ್ಲವನ್ನು ಸಹಿಸಿಕೊಂಡ ಕೌಸಲ್ಯೆ ಪುತ್ರಿಯ ವಿವಾಹ ಕಾರ್ಯದಲ್ಲಿ ಪಾಲ್ಗೊಂಡು ಹಿಂತಿರುಗಿದ ಬಳಿಕ ಅಯೋಧ್ಯೆ ಹಾಗೂ ಶಾಂತಾಳೊಂ ದಿಗಿನ ಬಾಂಧವ್ಯವೇ ಕಡಿದು ಹೋಯಿತು.

ಪುತ್ರ ಸಂತಾನವಿಲ್ಲ ಎಂಬ ಕೊರಗಿ ನಿಂದ ದಶರಥ ಹಾಗೂ ಪತ್ನಿಯರು ದುಃಖಿತರಾಗಿರುವಾಗ ವಸಿಷ್ಠರ ಉಪದೇಶದಂತೆ ಪುತ್ರಕಾಮೇಷ್ಠಿಯಾಗ ಮಾಡಲು ಸಿದ್ಧತೆ ನಡೆಸಲಾಯಿತು. ಆದರೆ ಆ ಯಾಗ ಮಾಡಬೇಕಿದ್ದರೆ ಕಾಡಿನಲ್ಲಿರುವ ಮಹರ್ಷಿಯನ್ನು ಊರಿಗೆ ಆಮಂತ್ರಿಸಬೇಕಾಗಿತ್ತು. ಅದಕ್ಕೆ ದಶರಥನ ನೇತೃತ್ವದಲ್ಲಿ ಕಾಡಿಗೆ ಹೋಗಿ ಋಷಿಯನ್ನು ಭೇಟಿಯಾಗಬೇಕಿತ್ತು. ಆದರೆ ಯಾರು ಆ ಋಷಿ? ಮತ್ಯಾರೂ ಅಲ್ಲ. ಆತನೇ ಪುತ್ರಿ ಶಾಂತಾಳ ಪತಿ ಋಷ್ಯಶೃಂಗ. ತನ್ನ ಪುತ್ರಿಯ ಪತಿ ಯಿಂದಲೇ ಪುತ್ರಕಾಮೇಷ್ಠಿ ಯಾಗವನ್ನು ಮಾಡಬೇಕಾದ ಪರಿಸ್ಥಿತಿ ದಶರಥನಿಗೆ ಉಂಟಾಯಿತು. ಆದರೆ ತನ್ನ ಅಳಿಯ ನಾಗಿದ್ದರೂ ವಿವಾಹ ದಿನದಂದು ಒಮ್ಮೆ ನೋಡಿದ್ದಲ್ಲದೆ ಆ ಬಳಿಕ ಅವರೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಂಡಿ ರಲಿಲ್ಲ. ಈಗ ಆತನನ್ನು ತನ್ನ ಅಯೋ ಧ್ಯೆಗೆ ಕರೆದುಕೊಂಡು ಬರಬೇಕಾದ ಅನಿವಾರ್ಯತೆ ದಶರಥನಿಗೆ ಉಂ ಟಾಯಿತು.

ಋಷ್ಯಶೃಂಗ ಮಹರ್ಷಿ ಯಿಂದ ಪುತ್ರಕಾಮೇಷ್ಠಿಯಾಗವನ್ನು ಪೂರೈಸಿ ಅದರಿಂದ ಲಭಿಸಿದ ಪ್ರಸಾದದಲ್ಲಿ ಅರ್ಧವನ್ನು ದಶರಥ ಕೌಸಲ್ಯೆಗೆ ನೀಡಿದ. ಉಳಿದಿರುವುದನ್ನು ಇತರ ಇಬ್ಬರು ಪತ್ನಿಯರಿಗೆ ನೀಡಿದ. ಅದನ್ನು ಸೇವಿಸಿದ ದಶರಥನ ಪತ್ನಿಯರು ನಾಲ್ಕು ಮಂದಿ ಪುತ್ರರಿಗೆ ಜನ್ಮ ನೀಡಿದರು. ಕೌಸಲ್ಯೆ ಅವತಾರ ಪುರುಷ ಬಾಲರಾಮನಿಗೂ, ಸುಮಿತ್ರೆ ಲಕ್ಷ್ಣಣ, ಶತ್ರುಘ್ನರಿಗೂ, ಕೈಕೇಯಿ ಭರತನಿಗೂ ಜನ್ಮ ನೀಡಿದರು. ಆ ಬಳಿಕ ಅಯೋಧ್ಯೆಯಲ್ಲಿ ಸಂತಸದ ದಿನಗಳು ಕಂಡು ಬಂದರೂ ಕೌಸಲ್ಯೆಯ ಕೊರಗಿಗೆ ಮತ್ತೊಂದು ಕಾರಣ ಉಂಟಾಯಿತು.  ರಾಮನನ್ನು ಕಾಡಿಗೆ ಅಟ್ಟಿ, ಭರತನಿಗೆ ಪಟ್ಟ ಎಂಬ ಕೈಕೇಯಿಯ ಬೇಡಿಕೆ ಬಗ್ಗೆ ತಿಳಿದ ಕೌಸಲ್ಯೆ ದೊಪ್ಪನೆ ಕೆಳಗೆ ಬಿದ್ದು ಬಿಟ್ಟಳು. ಯಾವ ತಾಯಿಗೂ ಈ ರೀತಿಯ ಸಂಕಷ್ಟ ಉಂಟಾಗಬಾರದೆಂದು ಬಿಕ್ಕಿ ಬಿಕ್ಕಿ ಅತ್ತಳು. ರಾಜ್ಯದ ಪಟ್ಟ ಬೇಕಾಗಿಲ್ಲ, ಆದರೆ ರಾಮ ಕಾಡಿಗೆ ಹೋಗುವುದಾ ದರೂ ಯಾತಕ್ಕೆ ತಾಯಿ ಹೃದಯ ಪ್ರಶ್ನಿಸಿತು. ಭರತ ಆಡಳಿತ ನಡೆಸಲಿ ತನ್ನ ರಾಮ ನನ್ನೊಂದಿಗೆ ಇರುವುದಕ್ಕೇನು ಅಡ್ಡಿ ಎಂದು ಗೋಗರೆದಳು. ಆದರೂ ರಾಮ ಪಿತೃ ವಾಕ್ಯ ಪಾಲನೆಗಾಗಿ ಕಾಡಿಗೆ ತೆರಳುವುದಾಗಿ ತಿಳಿಸಿದಾಗ ದುಃಖದ ಕಡಲಲ್ಲಿ ಮುಳುಗಿದ್ದ ಕೌಸಲ್ಯೆ ಏನೂ ಆಡದೆ ಸುಮ್ಮನಿದ್ದಳು. ಕೌಸಲ್ಯೆಗೆ ಬೇಕಿದ್ದರೆ ಆಗ ರಂಪಾಟ ಮಾಡಬಹು ದಾಗಿತ್ತು. ಆದರೆ ಧರ್ಮ ನಿಷ್ಠಳಾದ ಆಕೆ ಸಾಮಾನ್ಯ ಮಹಿಳೆಯರಂತಲ್ಲ ಎಂಬುದರಿಂದಾಗಿ ಆಕೆ ಮಹಾ ತಾಯಿ ಎಂದೇ ಪರಿಗಣಿಸಲ್ಪಟ್ಟಳು.

ಭಾರತದಲ್ಲಿ ಕೌಸಲ್ಯೆಗೆ ಏಕ ದೇವಾ ಲಯವಿದೆ. ಛತ್ತೀಸ್‌ಘಡ ಹಾಗೂ ಮಹಾರಾಷ್ಟ್ರದ ಗಡಿ ಪ್ರದೇಶವಾಗಿರುವ ಮಹಾ ನದಿ ತೀರದಲ್ಲಿ ಬಾಲರಾಮ ನನ್ನು ಮಡಿಲಲ್ಲಿ ಇರಿಸಿಕೊಂಡ ಕೌಸಲ್ಯೆಯ ದೇವಾಲಯವಿದೆ. ಸುಮಾರೂ ಎಂಟನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ರಾಮಾಯಣದ ಕಾಲದಲ್ಲಿ ದಕ್ಷಿಣ ಕೋಸಲ ರಾಜ್ಯ ವೆಂದರೆ ಛತ್ತಿಸ್‌ಘಡ, ಮಹಾರಾಷ್ಟ್ರ, ಒಡಿಶಾ, ಮಧ್ಯಪ್ರದೇಶದ ಒಂದಷ್ಟು ಭಾಗಗಳು ಸೇರಿದುದಾಗಿತ್ತು. ಈ ಕಾರಣದಿಂದಲೇ ಈ ಭಾಗದಲ್ಲಿ ಕೌಸಲ್ಯೆಗೆ ದೇವಸ್ಥಾನ ನಿರ್ಮಿಸಿರಬೇಕು.

Leave a Reply

Your email address will not be published. Required fields are marked *

You cannot copy content of this page