ಆರ್ಯ ಸಮುದಾಯ ಸಂಘ ಕಾಸರಗೋಡು ವಲಯ ಸಮಾವೇಶ

ಕಾಸರಗೋಡು: ಆರ್ಯ ಯಾನೆ ಮರಾಠ ಸಂಘ ಮಂಗಳೂರು-ಕಾಸರಗೋಡು, ಆರ್ಯ ಸಮುದಾಯ ಸಂಘ ಕಾಸರಗೋಡು ವಲಯ ಸಮಾವೇಶ ನಾಳೆ ಪಿಲಿಕುಂಜೆಯ ಶ್ರೀ ಭಗವತಿ ಸಭಾ ಭವನದಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಉದ್ಘಾಟನೆ, 10ರಿಂದ ಆಟೋಟ ಸ್ಪರ್ಧೆ, ಮಧ್ಯಾಹ್ನ 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 3.30ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ಆರ್ಯ ಯಾನೆ ಮರಾಠ ಸಮಾಜ ಸಂಘದ ಗೌರವಾಧ್ಯಕ್ಷೆ ಪ್ರೇಮಲತಾ ವೈ ರಾವ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮೋಹನ ರಾವ್ ಬೋಂಸ್ಲೇ, ಗಿರಿಧರ ರಾವ್ ವಾಗ್ಮನ್ ಚೊಟ್ಟೆ ಕುಂಡಂಕುಳಿ, ನಿಖಿಲ್ ಚೌದವ್ ಜಲ್ಲಿಗುಡ್ಡೆ ಭಾಗವಹಿಸುವರು. ಕಾಸರಗೋಡು ವಲಯ ಸಮಾಜ ಸಂಘಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ, ಸಾಧಕರಿಗೆ ಸನ್ಮಾನ, ಆಟೋಟ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ವಾಮನ ರಾವ್ ವಾಗ್ಮಾನ್ ಮುಳ್ಳಂ ಗೋಡು, ಕೃಷ್ಣೋಜಿ ರಾವ್ ಮಾಸ್ತರ್ ಅಂಬುಕುಂಜೆ ಶುಭ ಹಾರೈಸುವರು.

You cannot copy contents of this page