ಕೂಲಿ ಕಾರ್ಮಿಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಮಧೂರು: ಕೂಲಿ ಕಾರ್ಮಿಕ ನೋರ್ವ ನಿನ್ನೆ ಸಂಜೆ ಅವರ ಮನೆಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಧೂರಿಗೆ ಸಮೀಪದ ಪರಕ್ಕಿಲದ ಕೊರಗಪ್ಪ ಗಟ್ಟಿ- ದೇವಕಿ ದಂಪತಿ ಪುತ್ರ ಉಪೇಂದ್ರ ಗಟ್ಟಿ (42) ಸಾವನ್ನಪ್ಪಿದ ವ್ಯಕ್ತಿ. ವಿಷಯ ತಿಳಿದ  ವಿದ್ಯಾನಗರ ಪೊಲೀಸರು ಘಟನೆ ನಡೆದ ಸ್ಥಕ್ಕೆ ಆಗಮಿಸಿ ಶವ ಮಹಜರು ನಡೆಸಿದ್ದಾರೆ. ನಂತರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಮೃತರು ಹೆತ್ತವರ ಹೊರತಾಗಿ  ಪತ್ನಿ ಶಶಿಕಲ, ಮಕ್ಕಳಾದ ಚೈತ್ರಾ, ದೀಪಿಕ, ಸಹೋದರಿಯರಾದ ಪದ್ಮಾವತಿ, ರೋಹಿಣಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page