ದುಬಾಯಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟ ಯುವಕ ನಾಪತ್ತೆ

ಕಾಸರಗೋಡು: ದುಬಾಯಿಗೆ ಹೋಗಲೆಂದು ಮನೆಯಿಂದ ಹೊರಟ ಯುವಕ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ವಿದ್ಯಾನಗರ ಬೆದಿರ ಖಲೀಲ್ ಹೌಸ್‌ನ ಎ.ಎ. ಉಬೈಸ್ (26) ನಾಪತ್ತೆಯಾದ ಯುವಕ. ಈ ಬಗ್ಗೆ ತಾಯಿ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು  ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ದುಬಾಯಿಗೆ ಹೋಗಲೆಂದು ಜೂನ್ 22ರಂದು ಸಂಜೆ 4 ಗಂಟೆಗೆ ಉಬೈಸ್ ಮನೆಯಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವುದಾಗಿ ಉಬೈಸ್ ಮನೆಯವರಲ್ಲಿ ತಿಳಿಸಿದ್ದರು. ಆದರೆ ಅವರಿಂದ ಉಬೈಸ್‌ನ ಕುರಿತು ಯಾವುದೇ ಮಾಹಿತಿ ಇಲ್ಲವೆಂದು ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.

RELATED NEWS

You cannot copy contents of this page