ಮಂಜೇಶ್ವರ: ತಲಪಾಡಿಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ಗಂಭೀರ ವಾಗಿ ಗಾಯಗೊಂಡಿದ್ದು, ಆಟೋ ದಲ್ಲಿದ್ದ ಇಬ್ಬರು ಮತ್ತು ಕಾರುಗಳಲ್ಲಿ ದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ನಿನ್ನೆ ಸಂಜೆ 6.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಾಸರಗೋಡು ಕಡೆಯಿಂದ ಮಂ ಗಳೂರಿನತ್ತ ತೆರಳುತ್ತಿದ್ದ ಕಂಟೈನರ್ ಲಾರಿ ಆಟೋ ರಿಕ್ಷಾಕ್ಕೆ ಡಿsಕ್ಕಿಯÁಗು ವುದನ್ನು ತಪ್ಪಿಸಲು ಚಾಲಕ ಬಲ ಭಾಗಕ್ಕೆ ತಿರುಗಿಸಿದಾಗ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿ ಹಾಗೂ ಮೂರು ಕಾರು, ಆಟೋ ರಿಕ್ಷಾಕ್ಕೆ ಡಿsಕ್ಕಿ ಹೊಡೆದಿದೆ. ಡಿsಕ್ಕಿಯ ರಭಸಕ್ಕೆ ಒಂದು ಕಾರಿನ ಮೇಲೆ ಡಿವೈಡರ್ ಆಗಿ ಇರಿಸಿದ್ದ ಕಲ್ಲು ಮಗುಚಿ ಬಿದ್ದು ವಾಹನಕ್ಕೆ ಹಾನಿಯಾಗಿದೆ.
ಈ ಘಟನೆಯಲ್ಲಿ ಆಟೋ ರಿಕ್ಷಾ ಚಾಲಕ, ಕನ್ಯಾನ ನಿವಾಸಿ ಅಬ್ದುಲ್ ಅಜೀಜ್ ಗಂಭೀರವಾಗಿ ಗಾಯಗೊಂ ಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಆಟೋದಲ್ಲಿದ್ದ ಪ್ರಯಾಣಿಕ ರಾದ ಹನೀಫ್ ಮತ್ತು ವೆಂಕಪ್ಪ, ಹಾಗೂ ಅಪಘಾತಕ್ಕೀಡಾದ ಇತರ ವಾಹನಗಳಲ್ಲಿದ್ದವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಆರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಡಿsಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿದ್ದರು. ಇದೀಗ ಮತ್ತೆ ಅದೇ ಸ್ಥಳದಲ್ಲಿ ಅವಘಡ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ಭಾಗದಲ್ಲಿ ವಾಹನಗಳು ವೇಗದಲ್ಲಿ ಚಲಿಸುತ್ತಿರುವುದು ಅಪಘಾತಗಳಿಗೆ ಕಾರಣವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಅಪಘಾತದಿಂದ ಅಲ್ಪ ಹೊತ್ತು ಹೆದ್ದಾರಿಯಲ್ಲಿ ಸಂಚಾರ ಮೊಟಕುಗೊಂಡಿದ್ದು, ಮಂಜೇಶ್ವರ ಪೊಲೀಸರು ತಲುಪಿ ಅಪಘಾತಕ್ಕೀಡಾದ ವಾಹನಗಳನ್ನು ಕ್ರೆöÊನ್ ಮೂಲಕ ತೆರವುಗೊಳಿಸಿದ್ದಾರೆ. ಸರಣಿ ಅಪಘಾತಕ್ಕೆ ಸಂಬAಧಿಸಿ ಕಂಟೈನರ್ ಲಾರಿಯನ್ನು ಪೊಲೀಸರು ಕಸ್ಟಡಿಗೆ ತೆಗೆದು, ಚಾಲಕ ಬೆಂಗಳೂರು ನಿವಾಸಿ ವಡಿವೇಳು ವಿರುದ್ದ ಕೇಸು ದಾಖಲಿಸಿದ್ದಾರೆ. ಚಾಲಕ ಮದ್ಯಪಾನಗೈದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.





