ಕಣಜದ ಹುಳುಗಳ ದಾಳಿಗೆ ವೃದ್ಧೆ ಬಲಿ

ಬೋವಿಕ್ಕಾನ: ಕಣಜದ ಹುಳುಗಳ ದಾಳಿಗೊಳಗಾಗಿ ವೃದ್ಧೆ ಸಾವನ್ನಪ್ಪಿದ ಘಟನೆ ನಡೆದಿದೆ. ಎರಿಂಞಿಪುಳ ಮಾಲಾಂಕಡಪ್ಪಿನ ಟಿ. ನಾರಾಯಣಿ (77) ಸಾವನ್ನಪ್ಪಿದ ದುರ್ದೈವಿ. ಕಳೆದ ಶುಕ್ರವಾರ ಇವರು ತಮ್ಮ ಹಿತ್ತಿಲಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಣಜದ ಹುಳುಗಳು ಅವರ ಮೇಲೆ ದಾಳಿ ನಡೆಸಿವೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕಾಸರಗೋಡು  ಜನರಲ್ ಆಸ್ಪತ್ರೆಗೆ  ತಲುಪಿಸಿ ಚಿಕಿತ್ಸೆ ನೀಡಿ ನಂತರ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಂiiಲ್ಲಿ ದಾಖಲಿಸಿ ಉನ್ನತಮ ಟ್ಟದ ಚಿಕಿತ್ಸೆ ನೀಡಲಾಯಿ ತಾದರೂ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು. ಇವರು ಕೃಷಿ ಕಾರ್ಮಿಕೆ ಯಾಗಿದ್ದರು. ಮೃತರು ಮಕ್ಕಳಾದ ಟಿ. ದಾಮೋದರನ್, ಟಿ.ವಿಜಯ ಕುಮಾರಿ, ಸೊಸೆ ಸಿಂಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page