ಕರ್ನಾಟಕ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ಕಾಸರಗೋಡು ಶಾಂತಿನಗರದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 11.16 ಲೀಟರ್ ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶಾಂತಿನಗರದ ಸುರಾಜ್ ಎಸ್ (42) ಎಂಬಾತ ನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ.ಕಾಸರಗೋಡು ಎಕ್ಸೈಸ್ ಇನ್‌ಸ್ಪೆಕ್ಟರ್ ಅರುಣ್  ನೇತೃತ್ವದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ  ಇನ್‌ಸ್ಪೆಕ್ಟರ್ ಜೋಸೆಫ್ ಜೆ, ಕಾಸರಗೋಡು ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಜನಾರ್ದ ನನ್ ಕೆ.ಪಿ, ಪ್ರಿವೆಂಟೀವ್ ಆಫೀಸರ್ (ಗ್ರೇಡ್) ಪ್ರಸಾದ್ ಎಂ.ಎ, ಸಿಇಒ ಗಳಾದ ಚಾರ್ಲ್ಸ್ ಜೋಸ್, ಫಸೀಲಾ ಡಿ ಎಂಬವರು ಒಳಗೊಂಡಿದ್ದಾರೆ.

You cannot copy contents of this page