ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಾಳೆ : ಕಿಳಿಂಗಾರಿಗೆ ಹಾರಿಕಾ ಮಂಜುನಾಥ್
ನೀರ್ಚಾಲು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಿಳಿಂಗಾರಿನಲ್ಲಿ ಯುವಕೇಸರಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ಕ್ಲಬ್ನ ಆಶ್ರಯದಲ್ಲಿ ನಾಳೆ ನಡೆಯಲಿರುವ 10ನೇ ವರ್ಷದ ಮೊಸರುಕುಡಿಕೆ ಉತ್ಸವದಲ್ಲಿ ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಭಾಗವಹಿಸುವರು. ನಾಳೆ ಬೆಳಿಗ್ಗೆ 7.30ಕ್ಕೆ ಭಜನೆ, 9ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಿಳಿಂಗಾರು ಎಎಲ್ಪಿ ಶಾಲೆಯ ಮೆನೇಜರ್ ಸಾಯಿರಾಮ್ ಕೆ.ಎನ್. ಕೃಷ್ಣ ಭಟ್ ಉದ್ಘಾಟಿಸುವರು. ಮುಖ್ಯೋಪಾಧ್ಯಾಯಿನಿ ವಿದ್ಯಾ ಅಧ್ಯಕ್ಷತೆ ವಹಿಸುವರು.
ಉಷಾ ಕುಮಾರಿ, ಸುಧಾಕರ ಅನ್ನೆಪಲ್ಲಡ್ಕ, ಪ್ರಕಾಶ್ ಕಿಳಿಂಗಾರ್, ಶ್ರೀಜಿತ್ ಕಿಳಿಂಗಾರ್, ನಾರಾಯಣ ಪಿ. ಪೆರಡಾಲ, ಸುಶಾಂತ್ ಕೆ. ಕಿಳಿಂಗಾರ್ ಭಾಗವಹಿಸುವರು. 10ರಿಂದ ಆಟೋಟ ಸ್ಪರ್ಧೆ, 12.30ರಿಂದ ಅನ್ನ ಸಂತರ್ಪಣೆ, ಅಪರಾಹ್ನ 2 ಗಂಟೆಗೆ ಸಾರ್ವಜನಿಕ ಹಗ್ಗಜಗ್ಗಾಟ ಸ್ಪರ್ಧೆ, ಸಂಜೆ 4ರಿಂದ ಮಜೀರ್ಪಳ್ಳಕಟ್ಟೆ ಶಾಸ್ತಾನಗರ ಶ್ರೀ ಅಯ್ಯಪ್ಪ ಭಜನಾಮಂದಿರದಿಂದ ಆಕರ್ಷಕ ಶೋಭಾಯಾತ್ರೆ ನಡೆಯಲಿದೆ. 4.30ಕ್ಕೆ ಮೊಸರುಕುಡಿಕೆ ಜಾರುಕಂಬ ಸ್ಪರ್ಧೆ, ರಾತ್ರಿ 7ಕ್ಕೆ ಸಮಾರೋಪ ಸಮಾರಂಭ ಜರಗಲಿದೆ. ಹಾರಿಕಾ ಮಂಜುನಾಥ್ ಧಾರ್ಮಿಕ ಭಾಷಣ ಮಾಡುವರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸುವರು. ವಾರ್ಡ್ ಪ್ರತಿನಿಧಿ ಸೌಮ್ಯಾ ಮಹೇಶ್ ನಿಡುಗಳ, ಲೋಕೇಶ್ ಯು. ರಾಜೇಶ್ ಜಿ, ರಂಜಿತ್ ಅಜಿರ್ಕೊಡಿ, ಶಿವರಾಮ ಮೊಳೆಯಾರು, ಗಣೇಶ್ ಪಿ.ಎಂ. ಮುಂಡಾಂತ್ತಡ್ಕ ಉಪಸ್ಥಿತರಿರುವರು. 8ಕ್ಕೆ ಅನ್ನ ಸಂತರ್ಪಣೆ, 10.30ರಿಂದ ಸಸಿಹಿತ್ಲು ಮೇಳದವರಿಂದ ಶ್ರೀ ಭಗವತೀ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.