ಜಿಲ್ಲೆಯಲ್ಲಿ ಆಪರೇಶನ್ ಪಿ ಹಂಟ್: ಮಕ್ಕಳ ಅಶ್ಲೀಲ ವೀಡಿಯೋ ವೀಕ್ಷಿಸಿದ ಆರು ಮಂದಿ ಪೊಲೀಸ್ ಬಲೆಗೆ

ಕಾಸರಗೋಡು:  ಪ್ರಾಯಪೂರ್ತಿ ಯಾಗದ ಮಕ್ಕಳ ಅಶ್ಲೀಲ ವೀಡಿಯೋಗಳನ್ನು ವೀಕ್ಷಿಸುವವರ ಪತ್ತೆಗಾಗಿ ಜಿಲ್ಲೆಯಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ ಆರಂಭಿಸಿದ್ದಾರೆ.  ಜಿಲ್ಲೆಯಲ್ಲಿ ನಿನ್ನೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರು  ಮಂದಿಯನ್ನು   ಬಲೆಗೆ ಹಾಕಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ನಿರ್ದೇಶ ಪ್ರಕಾರ ಜಿಲ್ಲೆಯಲ್ಲಿ ನಿನ್ನೆ ನಡೆಸಿದ ಆಪರೇಶನ್ ಪಿ ಹಂಟ್ ವೇಳೆ ಈ ಯುವಕರನ್ನು ಪೊಲೀಸರು ಬಲೆಗೆ ಹಾಕಿಕೊಂಡಿ ದ್ದಾರೆ. ಕುಂಬಳೆ, ವಿದ್ಯಾನಗರ, ಬದಿಯಡ್ಕ, ರಾಜಪುರಂ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ, ಕಾಞಂಗಾಡ್‌ನಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ. ಅಶ್ಲೀಲ ವೀಡಿಯೋ ವೀಕ್ಷಿಸಲು ಉಪಯೋಗಿ ಸಿದ ಆರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಪರಿಶೀಲನೆಗಾಗಿ ಕಳುಹಿಸಿ ಕೊಡಲಾಗಿದೆ.  ಪರಿಶೀಲನೆಯ ವರದಿ ಲಭಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಕ್ಕಳ  ಹಕ್ಕು ಸಂರಕ್ಷಣೆಯಂಗವಾಗಿ ಕೇಂದ್ರ ಗೃಹ ಸಚಿವಾಲಯದ ನಿರ್ದೇಶ ಪ್ರಕಾರ ಆಪರೇಶನ್ ಪಿ ಹಂಟ್  ಎಂಬ ಹೆಸರಲ್ಲಿ ಪೊಲೀಸರು ವ್ಯಾಪಕ ಕಾರ್ಯಾಚರಣೆ  ಆರಂಭಿಸಿದ್ದಾರೆ.  ಅಪರಾಧಿಗಳೆಂದು ಪತ್ತೆಯಾದಲ್ಲಿ ಜಾಮೀನುರಹಿತ ಕಾಯ್ದೆಗಳ ಪ್ರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗು ವುದೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page