ಮನೆಗೆ ಅತಿಕ್ರಮಿಸಿ ನುಗ್ಗಿ ಪಟಾಕಿ ಸಿಡಿಸಿದ ಪ್ರಕರಣ: ಇಬ್ಬರು ಸೆರೆ

ಬದಿಯಡ್ಕ: ಮನೆಗೆ ಅತಿಕ್ರಮಿಸಿ ನುಗ್ಗಿ ಪಟಾಕಿ ಸಿಡಿಸಿ ಬೆದರಿಕೆ ಹುಟ್ಟಿಸಿದ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕುಂಟಾರಿನ ಕಿಶೋರ್, ಬಾವಿಕ್ಕೆರೆಯ ರಂಜಿತ್‌ನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳ 16ರಂದು ಸಂಜೆ ಘಟನೆ ನಡೆದಿತ್ತು. ನೆಕ್ರಾಜೆ ಮಾಳಂಗೈಯ ಮುಹಮ್ಮದ್ ಕುಂಞಿಯವರ ಮನೆಯ ವಿರುದ್ಧ ಆಕ್ರಮಣ ಉಂಟಾಗಿತ್ತು. ಹೆಲ್ಮೆಟ್ ಧರಿಸಿ  ತಲುಪಿದ ಇಬ್ಬರು ಮನೆಗೆ ಪಟಾಕಿ ಎಸೆದು ಭೀತಿಯ ವಾತಾವರಣ ಸೃಷ್ಟಿಸಿರುವುದಾಗಿ ಕೇಸು ದಾಖಲಿಸಲಾಗಿತ್ತು. ಮುಹಮ್ಮದ್ ಕುಂಞಿಯ ದೂರಿ ನಂತೆ ಪೊಲೀಸರು ಕೇಸು ದಾಖಲಿಸಿದ್ದು, ತನ್ನ ಪುತ್ರ ಅನ್ಯಧರ್ಮದ ಯುವತಿಯನ್ನು ವಿವಾಹವಾಗಿರುವುದರ ದ್ವೇಷದಿಂದ ಆಕ್ರಮಣ ನಡೆಸಿರಬೇಕೆಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಬದಿಯಡ್ಕ ಠಾಣೆಯ ಇನ್ಸ್‌ಪೆಕ್ಟರ್ ಕೆ. ಸುಧೀರ್‌ರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ  ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಇನ್ನು ಓರ್ವನನ್ನು ಸೆರೆ ಹಿಡಿಯಲು ಬಾಕಿ ಇದೆ ಎಂದು ತಿಳಿಸಿದ್ದಾರೆ.

You cannot copy contents of this page