ಬಿಎಂಎಸ್‌ನಿಂದ ವಿಶ್ವಕರ್ಮ ಜಯಂತಿ ಆಚರಣೆ

ಕಾಸರಗೋಡು: ಬಿಎಂಎಸ್‌ನ ಆಶ್ರಯದಲ್ಲಿ ವಿವಿಧ ಕಡೆಗಳಲ್ಲಿ ವಿಶ್ವಕರ್ಮ ಜಯಂತಿ ದಿನವನ್ನು ಕಾರ್ಮಿಕರ ದಿನವನ್ನಾಗಿ ಆಚರಿಸಲಾಯಿತು. ಕಾಸರಗೋಡು, ಉದುಮ, ಮಧೂರು ವಲಯಗಳ ಬಿಎಂಎಸ್ ಸಮಿತಿ ಆಶ್ರಯದಲ್ಲಿ ನಡೆದ ರ‍್ಯಾಲಿ ಹಾಗೂ ಸಾರ್ವಜನಿಕ ಸಮ್ಮೇಳನವನ್ನು ಅಸಂಘಟಿತ ಕಾರ್ಮಿಕರ ಕ್ಷೇಮ ನಿಧಿ ಜಿಲ್ಲಾ ಅಧ್ಯಕ್ಷ ಎಂ.ಕೆ. ರಾಘವನ್ ಉದ್ಘಾಟಿಸಿದರು. ಕರಂದಕ್ಕಾಡ್‌ನಿಂದ ಆರಂಭಿಸಿದ ರ‍್ಯಾಲಿ ಮೀಪುಗುರಿಯಲ್ಲಿ ಸಮಾಪ್ತಿಯಾಯಿತು. ಸಮ್ಮೇಳನದಲ್ಲಿ  ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಗುರುದಾಸ್ ಚೇನಕ್ಕೋಡು ಅಧ್ಯಕ್ಷತೆ ವಹಿಸಿದರು.  ಜಿಲ್ಲಾ ಅಧ್ಯಕ್ಷ ಉಪೇಂದ್ರ  ಕೋಟೆಕಣಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸುರೇಶ್ ದೇಳಿ, ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್, ಮಧೂರು ವಲಯ ಕಾರ್ಯದರ್ಶಿ ಶ್ರೀಧರ ಚೇನಕ್ಕೋಡು, ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಮನೀಶ್ ಮಾತನಾಡಿದರು. ವಲಯ ಅಧ್ಯಕ್ಷ ಬಾಲಕೃಷ್ಣನ್ ನೆಲ್ಲಿಕುಂಜೆ ಸ್ವಾಗತಿಸಿ, ಭಾಸ್ಕರನ್ ಪೊಯಿನಾಚಿ ವಂದಿಸಿದರು.

You cannot copy contents of this page