ಕಾಸರಗೋಡಿನ ಬಸ್ ಟೈಂ ಕೀಪರ್ ನಿದ್ದೆಯಲ್ಲೇ ಹೃದಯಾಘಾತದಿಂದ ನಿಧನ

ಕುಂಬಳೆ: ಇಲ್ಲಿನ ಕಂಚಿಕಟ್ಟೆ  ಬಳಿಯ ನಿವಾಸಿಯೂ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಬಸ್‌ಗಳ ಟೈಂ ಕೀಪರ್ ಆಗಿದ್ದ ಚಂದ್ರಶೇಖರ ಭಂಡಾರಿ (63) ನಿದ್ದೆಯಲ್ಲೇ ಹೃದಯಾಘಾತದಿಂದ ನಿಧನ ಹೊಂದಿದರು.

ನಿನ್ನೆ ರಾತ್ರಿ ಊಟಮಾಡಿದ ಬಳಿಕ ಮನೆಯವರೊಂದಿಗೆ ಮಾತನಾಡಿ 1 ಗಂಟೆ ವೇಳೆ ನಿದ್ರಿಸಿದ್ದರು. ಇಂದು ಮುಂಜಾನೆ 4 ಗಂಟೆಗೆ ನೋಡಿದಾಗ ಇವರು ನಿಶ್ಚಲರಾಗಿರುವುದು ಕಂಡು ಬಂದಿದೆಯೆಂದು ಸಂಬಂಧಿಕರು ತಿಳಿಸಿದ್ದಾರೆ. ಕೂಡಲೇ ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಲಾಯಿತು. ಅಲ್ಲಿ ವೈದ್ಯರು ನಡೆಸಿದ ತಪಾಸಣೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಹಿಂದೆ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಚಂದ್ರಶೇಖರ ಭಂಡಾರಿ ಬಿಎಂಎಸ್, ಆರ್‌ಎಸ್‌ಎಸ್ ಕಾರ್ಯಕರ್ತನೂ ಆಗಿದ್ದರು. ಮೃತರು ಪತ್ನಿ ಮೀನಾಕ್ಷಿ, ಮಕ್ಕಳಾದ ನಿಶಾ (ಅಧ್ಯಾಪಿಕೆ), ನಿತೇಶ್, ಅಳಿಯ ನಿದೇಶ್ (ಮುಂಬೈ ಏರ್‌ಪೋರ್ಟ್ ಉದ್ಯೋಗಿ),  ಸಹೋದರ ಸಂಜೀವ, ಸಹೋದರಿ ಶಾರದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page