ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆ ವಾರ್ಷಿಕೋತ್ಸವ; ಕೃಷಿರತ್ನ ಬಿರುದು ಪ್ರದಾನ

ಮಂಗಲ್ಪಾಡಿ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಗಲ್ಪಾಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಕುಬಣೂರು ಶ್ರೀ ರಾಮ ಎ.ಯು.ಪಿ. ಶಾಲಾ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಮಂಗಲ್ಪಾಡಿ ಶಾಖೆಯ ಅಧ್ಯಕ್ಷ ಸತೀಶ್ ಎಂ.ಹೇರೂರು ಅಧ್ಯಕ್ಷ ತೆ ವಹಿಸಿದರು. ಶಂಕರ ಕುಂಜತ್ತೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಶ್ರೀನಿವಾಸ ಮೂಲ್ಯ ಮಯ್ಯರ ಮೂಲೆ ಮತ್ತು ಮುಂಡಪ್ಪ ಮೂಲ್ಯ ಮಯ್ಯರ ಮೂಲೆ ಇವರಿಗೆ ಕೃಷಿರತ್ನ ಬಿರುದು ನೀಡಿ ಸನ್ಮಾನಿಸ ಲಾಯಿತು. ಸುಮತಿ ಟೀಚರ್ ಪರಿಚ ಯಿಸಿದರು. ನಂತರ ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ಶ್ರೀಜಿತ.ಬಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರಿಯಶ್ರೀಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಾರಿಜ ಕುಲಾಲ್ ಬೇಕೂರು ಹಾಗೂ ದಿ| ಸೋಮನಾಥ ಬೊಳ್ಳಾರು ಇವರ ಕುಟುಂಬಕ್ಕೆ ಸಹಾಯಹಸ್ತ ನೀಡಲಾಯಿತು. ಶಂಕರ ಕುಂಜತ್ತೂರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕುಶಲಾಕ್ಷಿ. ವಿ. ಕುಲಾಲ್ ಕಣ್ವತೀರ್ಥ (ತುಳು ಸಾಹಿತಿ), ದಾಮೋದರ ಮಾಸ್ಟರ್ ಕಬ್ಬಿನಹಿತ್ತಿಲು (ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ), ಬಾಲಕೃಷ್ಣ ಶೆಟ್ಟಿ ಮೀನಾರು (ನಿವೃತ್ತ ಮುಖ್ಯೋಪಾಧ್ಯಾಯರು), ಗೌರವ ಸಲಹೆಗಾರ ಸೇಸಪ್ಪ ಮೂಲ್ಯ ಬೊಳ್ಳಾರು, ಗೌರವಾಧ್ಯಕ್ಷ ವಾಸು ಕುಲಾಲ್ ಬೊಳ್ಳಾರು ಉಪಸ್ಥಿತರಿದ್ದರು. ಪ್ರೇಮಲತಾ ಬೊಳ್ಳಾರು ಮತ್ತು ಬಳಗದವರ ಪ್ರಾರ್ಥನೆ, ಬಾಲಕೃಷ್ಣ ಪಯ್ಯಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವನೀತ ರಾಜೇಶ್ ಕೊಂಡೆವೂರು ವರದಿ ಮಂಡಿಸಿದರು.ನಾರಾಯಣ ಕುಲಾಲ ಕುಬಣೂರು ವಂದಿಸಿದರು. ಎನ್.ಕೆ.ಕುಲಾಲ್ ಬೇಕೂರು ನಿರೂಪಿಸಿದರು. ಸಮಿತಿಯ ಸದಸ್ಯರು ಭಾಗವಹಿಸಿದ್ದರು. ನಂತರ ಸಮುದಾಯದ ಪ್ರತಿಭಾನ್ವಿತರಿಂದ ಕುಲಾಲ ಕಲರವ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರತಿಭೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

You cannot copy contents of this page