ರಾಜ್ಯದಲ್ಲಿ ಎಂ ಪೋಕ್ಸ್ ಖಚಿತ: ಯುಎಇಯಿಂದ ತಲುಪಿದ ಯುವಕನಿಗೆ ರೋಗಲಕ್ಷಣ

ಮಲಪ್ಪುರಂ: ರಾಜ್ಯದಲ್ಲಿ ಎಂ ಪೋಕ್ಸ್ ಖಚಿತಪಡಿಸಲಾಗಿದೆ. ರೋಗ ಲಕ್ಷಣಗಳೊಂದಿಗೆ ಮಲಪ್ಪುರಂನಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿಗೆ ರೋಗ ಖಚಿತಪಡಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜೋರ್ಜ್ ತಿಳಿಸಿದ್ದಾರೆ. ಯುಎಇ ಯಿಂದ ತಲುಪಿದ 38 ವರ್ಷದ ವ್ಯಕ್ತಿಗೆ ಎಂಪೋಕ್ಸ್ ಖಚಿತಪಡಿಸ ಲಾಗಿದೆ. ಇತರ ದೇಶಗಳಿಂದ ಕೇರಳಕ್ಕೆ ತಲುಪುವವರಿಗೆ ರೋಗಲಕ್ಷಣಗಳು ಇದ್ದರೆ ಚಿಕಿತ್ಸೆ ಪಡೆಯಬೇಕೆಂದು ಆರೋಗ್ಯ ಇಲಾಖೆ ಮಾಹಿತಿ ನೀಡಬೇಕೆಂದು ಸಚಿವೆ ವಿನಂತಿಸಿದ್ದಾರೆ.

ಚಿಕಿತ್ಸೆ ಹಾಗೂ ಐಸೋ ಲೇಷನ್ ಸೌಕರ್ಯಗಳಿರುವ ಆಸ್ಪತ್ರೆಗಳ ಹೆಸರು ಹಾಗೂ ನೋಡಲ್ ಆಫೀಸರ್‌ಗಳ ಫೋನ್ ನಂಬ್ರವನ್ನು ಬಹಿರಂಗ ಪಡಿಸಲಾಗಿದೆ. ಇದಲ್ಲದೆ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲೂ ಚಿಕಿತ್ಸಾ ಸೌಕರ್ಯ ಏರ್ಪ ಡಿಸಲಾಗಿದೆ ಎಂದು ಸಚಿವೆ ಸ್ಪಷ್ಟಪಡಿಸಿದರು. ಎರಡು ದಿನದ ಹಿಂದೆ ದುಬಾಯಿಯಿಂದ ತಲುಪಿದ ಯುವಕ ರೋಗ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರದ ಹಿಂದೆ ಇವರು ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ದೇಹದಲ್ಲಿ ಚಿಕನ್‌ಫಾಕ್ಸ್‌ಗೆ ಸಮಾನವಾದ ಗುಳ್ಳೆಗಳು ಕಂಡು ಬಂದ ಹಿನ್ನೆಲೆಯಲ್ಲಿ ನಿಗಾ ವಹಿಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page