ಹಳದಿಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತ್ಯು

ಕಾಸರಗೋಡು: ಹಳದಿಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಬಳಿಯ ಮಂಗಲ್ಪಾಡಿ ಕೃಷ್ಣನಗರ ನಿವಾಸಿ ದಿ| ಭೋಜ ಎಂಬವರ ಪುತ್ರ ರಂಜಿತ್ (38) ನಿನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಇವರಿಗೆ ಜ್ವರ ಬಾಧಿಸಿತ್ತೆನ್ನಲಾಗಿದೆ. ಇದರಿಂದ ಕುಂಬಳೆಯ ಆಸ್ಪತ್ರೆಯಿಂದ ಪಡೆದಿದ್ದರು. ಆದರೂ ಜ್ವರ ಕಡಿಮೆಯಾಗದುದುರಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಇವರಿಗೆ ಹಳದಿ ಕಾಮಾಲೆ ಬಾಧಿಸಿರುವುದು ತಿಳಿದುಬಂದಿತ್ತು. ಇದರಿಂದ ರಂಜಿತ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಇವರು ಮೃತಪಟ್ಟರು. ಕೂಲಿ ಕಾರ್ಮಿಕನಾಗಿದ್ದ ಇವರು ಕಬಡ್ಡಿ ಪಟುವಾಗಿಯೂ ಗುರುತಿಸಿಕೊಂಡಿದ್ದರು. ಮಂಗಲ್ಪಾಡಿ  ಕೃಷ್ಣನಗರದ ಚೈತನ್ಯ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯನೂ ಆಗಿದ್ದರು.

ಮೃತರು ತಾಯಿ ಪದ್ಮಾವತಿ, ಸಹೋದರ-ಸಹೋದರಿಯರಾದ ವಿಜಯ ಕೆ.ಆರ್, ಸತೀಶ, ಸುನಿಲ್, ತುಳಸಿಕುಮಾರ್, ಉದಯ, ದಿನೇಶ್, ಸುಜಿತ್, ಸಚಿನ್, ಪ್ರೇಮ, ಭವಂತಿ, ಸುನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹಳದಿ ಕಾಮಾಲೆ ಬಾಧಿಸಿ ಚಿಕಿತ್ಸೆಯಲ್ಲಿದ್ದ ನೆಲ್ಲಿಕಟ್ಟೆ ನಿವಾಸಿಯೂ ಪ್ರಸ್ತುತ ಕೋಟಪ್ಪಾರದಲ್ಲಿ ವಾಸಿಸುತ್ತಿದ್ದ ಡಿ. ರಾಧಾಕೃಷ್ಣನ್ (48) ಎಂಬವರೂ ನಿನ್ನೆ ಮೃತಪಟ್ಟಿದ್ದಾರೆ. ಕೋಟಪ್ಪಾರದಲ್ಲಿರುವ  ವಿಠಲ್ ಕ್ಯಾಶ್ಯೂ ಕಂಪೆನಿಯ ಚಾಲಕನಾಗಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗಿನಿಂದ ಇವರಿಗೆ ಹಳದಿ ಕಾಮಾಲೆ ಬಾಧಿಸಿದ್ದು, ಇದರಿಂದ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ರೇಶ್ಮ (ಪಡನ್ನಕ್ಕಾಡ್ ಆರ್.ಸಿ. ಮಾರ್ಟ್ ಗ್ರೂಪ್ ನೌಕರೆ), ಮಕ್ಕಳಾದ ಧನುಷ್, ದಕ್ಷಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page