ಪತ್ನಿ ಆತ್ಮಹತ್ಯೆಗೈದ 28ನೇ ದಿನ ಪತಿ ನೇಣು ಬಿಗಿದು ಸಾವು

ಕಾಸರಗೋಡು: ಪತ್ನಿ ಆತ್ಮಹತ್ಯೆಗೈದ ಘಟನೆಯಿಂದ ತೀವ್ರ ಮನನೊಂದಿದ್ದ ಪತಿ ಕೂಡಾ  ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪರಪ್ಪ ಬಿರಿಕುಳಂ  ಕುರುಂಬಾಯಿ ಎಂಬಲ್ಲಿನ ಕೆ. ಪವಿತ್ರನ್ (58) ಆತ್ಮಹತ್ಯೆಗೈದ ವ್ಯಕ್ತಿ. ಇವರು ಕೃಷಿಕನಾಗಿದ್ದರು. ನಿನ್ನೆ ರಾತ್ರಿ 10.30ರ ವೇಳೆ ಬೆಡ್‌ರೂಂನ ಫ್ಯಾನ್‌ನಲ್ಲಿ  ನೇಣುಬಿಗಿದ ಸಾವಿಗೀ ಡಾದ ಸ್ಥಿತಿಯಲ್ಲಿ ಇವರು ಪತ್ತೆಯಾಗಿ ದ್ದರು.  ಘಟನೆ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಕೆಲಸಕ್ಕೆ ಹೋಗಿದ್ದ ಪುತ್ರ ಮರಳಿ ಬಂದಾಗ ಪವಿತ್ರನ್ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೇ ಫ್ಯಾನ್‌ನಲ್ಲಿ ಪವಿತ್ರನ್‌ರ ಪತ್ನಿ ಗೀತಾ ಅಗೋಸ್ತ್ 14 ರಂದು  ನೇಣುಬಿಗಿದು ಆತ್ಮಹತ್ಯೆಗೈದಿದ್ದರು.

ದಿ| ಪೊಕ್ಕನ್-ವಟ್ಟಿಚ್ಚಿ ದಂಪತಿಯ  ಪುತ್ರನಾದ ಮೃತರು ಮಕ್ಕಳಾದ ವೈಶಾಖ್ (ಲಾರಿ ಚಾಲಕ), ವೈಷ್ಣವ್ (ಬಸ್ ಕಂಡಕ್ಟರ್) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page