ಬಿಎಂಎಸ್ ಕಾರ್ಯಕರ್ತ ಜ್ಯೋತಿಷ್ ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಕೊಯಂಬತ್ತೂರಿನಿಂದ ಸೆರೆ

ಕಾಸರಗೋಡು:  ಬಿಎಂಎಸ್ ಕಾರ್ಯಕರ್ತನಾದ ಕಾಸರಗೋಡು ನುಳ್ಳಿಪ್ಪಾಡಿ ಜೆ.ಪಿ ನಗರದ ಜ್ಯೋತಿಷ್‌ರನ್ನು 2013ರಂದು ಚೆರ್ಕಳ ಸಮೀಪದ ಸಂತೋಷ್‌ನಗರದಲ್ಲಿ ಕೊಲೆಗೈಯ್ಯಲೆತ್ನಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಕೊಯಂಬತ್ತೂರಿನಿಂದ ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. 

ತಳಂಗರೆ ಪಳ್ಳಿಕ್ಕಾಲ್ ಪಡುಪ್ಪಿಲ್ ಹೌಸ್‌ನ ಅಬ್ದುಲ್ ಶಹೀರ್ ಅನಸ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನನ್ನು ಈ ಹಿಂದೆ ಬಂಧಿಸಿದ್ದರು. ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಆತ ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಅದರಿಂದಾಗಿ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ(ಪ್ರಥಮ) ಆತನನ್ನು ತಲೆಮರೆಸಿಕೊಂಡಿರುವ ಆರೋಪಿಯನ್ನಾಗಿ ಘೋಷಿಸಿ ವಾರಂಟ್ ಜ್ಯಾರಿಗೊಳಿಸಿತ್ತು. ಅದರಂತೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ  ಆತನನ್ನು ಕೊಯಂಬತ್ತೂರಿನಿಂದ ಬಂಧಿಸಿದ್ದಾರೆ. ಬಿಎಂಎಸ್ ಕಾರ್ಯಕರ್ತನಾಗಿದ್ದ ಜ್ಯೋತಿಷ್ ವರ್ಷಗಳ ಹಿಂದೆ ಆತ್ಮಹತ್ಯೆಗೈದಿದ್ದರು.

You cannot copy contents of this page