ಉಪ್ಪಳ: ತೀರ್ಥ ಅಮಾವಾಸ್ಯೆ ಪ್ರಯುಕ್ತ ಐಲ ಶಿವಾಜಿನಗರದ ಸಿಂಧೂ ಸಮುದ್ರ ಕಿನಾರೆಯಲ್ಲಿ ಇಂದು ತೀರ್ಥ ಸ್ನಾನ ನಡೆಯುತ್ತಿದೆ. ಕರ್ನಾಟಕ ಸಹಿತ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಇಂದು ಮುಂಜಾನೆಯಿಂದಲೇ ಇಲ್ಲಿಗೆ ತಲುಪಿ ತೀರ್ಥಸ್ನಾನ ಮಾಡಿ ಪುನೀತರಾದರು. ಐಲ ಶಿವಾಜಿನಗರ ಶ್ರೀ ಗಣೇಶೋತ್ಸವ ಮತ್ತು ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ ಸಮಿತಿ ನೇತೃತ್ವದಲ್ಲಿ ಐಲ ರೈಲ್ವೇ ಗೇಟ್ ಬಳಿಯಿಂದ ಸಮುದ್ರ ಕಿನಾರೆವರೆಗೆ ತಳಿರು ತೋರಣ ಸಹಿತ ಶೃಂಗರಿಸಲಾಗಿದೆ. ಅಲ್ಲದೆ ಸಮಿತಿ ವತಿಯಿಂದ ರಕ್ಷಣಾ ಕಾರ್ಯ ಸಹಿತ ವಿವಿಧ ವ್ಯವಸ್ಥೆ ಏರ್ಪಡಿಸಲಾಗಿದೆ.






