ಕುಂಬಳೆ: ಕುಂಬಳೆ ಬದ್ರಿಯಾ ನಗರದ ಸಾರ್ವಜನಿಕ ಸ್ಥಳದಲ್ಲಿ ಹಣವಿರಿಸಿ ನಡೆಯುತ್ತಿದ್ದ ಜೂಜಾಟ ಕೇಂದ್ರಕ್ಕೆ ಪೊಲೀಸರು ನಿನ್ನೆ ದಾಳಿ ನಡೆಸಿ ಐದು ಮಂದಿಯನ್ನು ಬಂಧಿಸಿ ಕೇಸು ದಾಖಲಿಸಿದ್ದಾರೆ. ಮಂಗಲ್ಪಾಡಿ ಮಣ್ಣಂಗುಳಿಯ ಅಹಮ್ಮದ್ ಸುಲ್ತಾನ್ (49), ಮಂಗಳೂರು ತೆಂಕ ಎಡಪದವಿನ ಇಸ್ಮಾಯಿಲ್ ಮುಹ ಮ್ಮದ್ ಶರೀಫ್ (83), ಉಳಿಯತ್ತಡ್ಕ ನೇಶನಲ್ ನಗರದ ಸಫ್ರಾಸ್ (34), ಬಂಟ್ವಾಳ ಬಿರ್ಮುದೆಯ ಶಮೀರ್ (46), ಮಂಗಳೂರು ಅತ್ತಾವರದ ಅಬ್ದುಲ್ ಮಜೀದ್ (40)ಎಂಬಿವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.






