ಅಮೀಬಿಕ್ ಮೆದುಳು ಜ್ವರ ಬಾಧಿಸಿ ಯುವಕ ಮೃತ್ಯು

ಕಾಸರಗೋಡು: ಅಮೀಬಿಕ್ ಮೆದುಳು ಜ್ವರ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಚಟ್ಟಂಚಾಲ್ ಉಕ್ರಂಪಾಡಿ ನಿವಾಸಿ ಮಣಿಕಂಠನ್ (38 ಎಂಬವರು ಮೃತಪಟ್ಟ ವ್ಯಕ್ತಿ. ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ನಿಧನ ಸಂಭವಿಸಿದೆ. ಇವರು ಮುಂಬಯಿಯ ಅಂಗಡಿಯಲ್ಲಿ ಸಹೋದರ ಶಶಿಯೊಂದಿಗೆ ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮಣಿಕಂಠನ್‌ರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಇದರಿಂದ ಊರಿಗೆ ಬಂದ ಅವರು ಕಾಸರಗೋಡು ಜನರಲ್ ಆಸ್ಪತ್ರೆಗೆ ಚಿಕಿತ್ಸೆಗೆ ತಲುಪಿದ್ದರು. ಆಸ್ಪತ್ರೆಯಲ್ಲಿ ದಾಖಲಾದ ಇವರಿಗೆ ಜ್ವರ ಮತ್ತಷ್ಟು ಉಲ್ಬಣಗೊಂಡಿತು. ಇದರಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಅಲ್ಲಿ ನಡೆಸಿದ ತಪಾಸಣೆಯಲ್ಲಿ ಮಣಿಕಂಠನ್‌ಗೆ ಅಮೀಬಿಕ್ ಮೆದುಳು ಜ್ವರ ಬಾಧಿಸಿರುವುದಾಗಿ ತಿಳಿದು ಬಂದಿತ್ತು.

ಕುಮಾರನ್ ನಾಯರ್ – ತಂಬಾಯಿ ಅಮ್ಮ ದಂಪತಿಯ ಪುತ್ರನಾದ ಮೃತರು ಪತ್ನಿ ನಿಮಿಷ, ಮಕ್ಕಳಾದ ನಿವೇದ್ಯ, ಸೈನಿಕ, ಸಹೋದರ ಸಹೋದರಿಯರಾದ ಕಮಲಾಕ್ಷಿ, ಗೀತ, ರವಿ, ರೋಹಿಣಿ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page