ಜನರ ಧಾರ್ಮಿಕ ಭಾವನೆಗೆ ಧಕ್ಕೆ ಸೃಷ್ಟಿಸುವ ರೀತಿಯಲ್ಲಿ ಸಾಮಾಜಿಕ ತಾಣದಲ್ಲಿ ಹೇಳಿಕೆ: ಓರ್ವನ ವಿರುದ್ಧ ಕೇಸು
ಕುಂಬಳೆ: ಜನರ ಧಾರ್ಮಿಕ ಭಾವನೆಗೆ ಧಕ್ಕೆ ಸೃಷ್ಟಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಹಾಗೂ ಚಿತ್ರವನ್ನು ಬಹಿರಂಗಪಡಿಸಿದ ಆರೋಪದಂತೆ ಓರ್ವನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ.
ಮಂಗಲ್ಪಾಡಿ, ಶಿರಿಯ ಕುನ್ನಿಲ್ ಜಿಎಚ್‌ಎಸ್‌ಎಸ್ ನೀರಿನ ಟ್ಯಾಂಕ್ ಸಮೀಪದ ಅಬ್ದುಲ್ ಖಾದರ್ ಪುದಿಯಂಗಾಡಿ ಎಂಬಾತನ ವಿರುದ್ಧ ಕೇಸುದಾಖಲಿಸಲಾಗಿದೆ. ಈತ ಒಂದು ಧರ್ಮದವರ ಭಾವನೆಗೆ ಧಕ್ಕೆ ಉಂಟುಮಾ
ಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾನೆಂಬ ಆರೋಪದಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ ೧೫೩ರ ಪ್ರಕಾರ ಕೇಸು ದಾಖಲಿಸ ಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಈ ಹಿಂದೆಯೂ ಇದೇ ರೀತಿಯಲ್ಲಿ ಜನರ ಧಾರ್ಮಿಕ ಭಾವನೆಯನ್ನು ಅವಹೇಳನಗೈಯ್ಯುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಹೇಳಿಕೆ ನೀಡಿದ ಪ್ರಕರ ಣದಲ್ಲೂ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.