ನೀರ್ಚಾಲಿನಲ್ಲಿ ಸೇವಾಭಾರತಿ ರಕ್ತದಾನ ಶಿಬಿರ

ಬದಿಯಡ್ಕ: ಸೇವಾಭಾರತಿ ನೀರ್ಚಾಲು ಹಾಗೂ ಕಾಸರಗೋಡು ಸರಕಾರಿ ಜನರಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ವಠಾರದಲ್ಲಿ ರಕ್ತದಾನ ಶಿಬಿರ ಜರಗಿತು. ವಿಶ್ವಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಜಯದೇವ ಖಂಡಿಗೆ ಉದ್ಘಾಟಿಸಿದರು. ಸೇವಾಭಾರತಿಯ ಸದಾಶಿವ ಮಾಸ್ತರ್, ಪ್ರದೀಪ್ ಮಾಸ್ತರ್, ಬಾಲಕೃಷ್ಣ ಏಣಿಯರ್ಪು, ಬಾಲಸುಬ್ರಹ್ಮಣ್ಯ ಭಟ್ ಮಲ್ಲಡ್ಕ, ಸತೀಶ ಏಣಿಯರ್ಪು, ಶಶಿಧರ, ಗಂಗಾಧರ ಓಣಿಯಡ್ಕ, ಶ್ರೀಜಿತ್, ಮಹೇಶ್ ವಳಕ್ಕುಂಜ, ಅಜಿತ್ ಬೇಳ ನೇತೃತ್ವ ನೀಡಿದ್ದರು. ವಿವಿಧ ಸಂಘಸAಸ್ಥೆಗಳ ಸದಸ್ಯರು, ಸಾಮಾಜಿಕ ಕಾರ್ಯಕರ್ತರು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.

You cannot copy contents of this page