ಪೆರ್ಲ: ಜಬ್ಬಾರ್ ಸಂಸ್ಮರಣಾ ದಿನ ಆಚರಣೆ

ಪೆರ್ಲ: ಯುವ ಕಾಂಗ್ರೆಸ್ ಕಾರ್ಯ ಕರ್ತನಾಗಿದ್ದ ಜಬ್ಬಾರ್ ಪೆರ್ಲ ಅವರ 15ನೇ ಹುತಾತ್ಮ ದಿನವನ್ನು ಮಂಡಲ ಕಾಂಗ್ರೆಸ್ ವತಿಯಿಂದ ನಿನ್ನೆ ಸಂಜೆ ಇಂದಿರಾ ಭವನದಲ್ಲಿ ಆಚರಿಸ ಲಾಯಿತು. ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಝಲ್ ಉದ್ಘಾಟಿಸಿದರು. ಡಿಸಿಸಿ ಉಪಾಧ್ಯಕ್ಷ ಬಿ.ಪಿ.ಪ್ರದೀಪ್ ಕುಮಾರ್ ಪ್ರಾಸ್ತಾವಿ ಕವಾಗಿ ಮಾತನಾಡಿದರು.ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕೇಯನ್ ಪೆರಿಯ, ಎಣ್ಮಕಜೆ ಪಂ. ಸದಸ್ಯ ರಾಧಾಕೃಷ್ಣನ್ ಮಾಸ್ಟರ್, ಡಿಕೆಟಿಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್, ಶ್ರೀನಾಥ್ ಬದಿಯಡ್ಕ, ಜುನೈದ್ ಉರುಮಿ, ಲೀಗ್ ಮುಖಂಡ ರಾದ ಸಿದ್ದೀಕ್ ಖಂಡಿಗೆ ಸಿದ್ದಿಕ್ ಮಾತ ನಾಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು, ಅಬ್ದುಲ್ ರಝಾಕ್ ಅಜಿಲಡ್ಕ ಸ್ವಾಗತಿಸಿ, ಮಹಿಳಾ ನಾಯ್ಕ್ ವಂದಿಸಿದರು.

You cannot copy contents of this page