ಸೀತಾಂಗೋಳಿಯಲ್ಲಿ ಯುವಕನ ಕೊಲೆ : ಬಂಧಿತ ಆರೋಪಿಗೆ ರಿಮಾಂಡ್

ಕುಂಬಳೆ: ಬಾಪಾಲಿಪೊನ ಕುಂಟಿಕಾನ ನಿವಾಸಿಯಾದ  ಸಫಾಹಿದ್  ಯಾನೆ ಶಫಾಯತ್ (35) ಎಂಬವರನ್ನು ತಲೆಗೆ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಕುಂಬಳೆ ನಾಯ್ಕಾಪು ಕೋಟೆಕಾರಿನ ಶ್ರೀನಿವಾಸ (39) ಎಂಬಾತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಇದೇ ವೇಳೆ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿಯುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.  ಘಟನೆಗೆ ಸಂಬಂಧಿಸಿ  ಸೀತಾಂಗೋಳಿಯ ವಿವಿಧೆಡೆಗಳ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾ ಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಶಾಮೀಲಾಗಿದ್ದಾ ರೆಯೇ ಎಂದು ತಿಳಿಯಲು ತನಿಖೆ ಮುಂದುವರಿಸಲಾಗಿದೆಯೆಂದು  ಪೊಲೀಸರು ತಿಳಿಸಿದ್ದಾರೆ.

  ಮೊನ್ನೆ ಮಧ್ಯಾಹ್ನ ೨.೩೦ರ ವೇಳೆ ಸೀತಾಂಗೋಳಿಯ ಬಿವರೇಜಸ್ ಮದ್ಯದಂಗಡಿ ಸಮೀಪ ಕಟ್ಟಡದ ಹಿಂಬದಿಯಲ್ಲಿ ಶಫಾಯತ್‌ರ ಮೃತದೇಹ ಕಂಡುಬಂದಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು  ನಡೆಸಿದ ತನಿಖೆಯಲ್ಲಿ  ಶಫಾಯತ್ ರನ್ನು ಮರದ ತುಂಡಿನಿಂದ  ತಲೆಗೆ ಹೊಡೆದು ಕೊಲೆಗೈದಿರುವುದಾಗಿ ತಿಳಿದುಬಂದಿತ್ತು.

You cannot copy contents of this page