ಹಾನಿಗೊಂಡ ಕೆಪಿಆರ್ ರಾವ್ ರಸ್ತೆ :ಮಳೆಗೆ ಮುಂಚಿತ ದುರಸ್ತಿಗೆ ಆಗ್ರಹ

ಕಾಸರಗೋಡು: ಕಳೆದ ವರ್ಷದ ತೀವ್ರ ಮಳೆಗೆ ರಸ್ತೆಯ ಒಂದು ಭಾಗವೇ ನಾಶವಾದ ಸ್ಥಿತಿಯಲ್ಲಿರುವ  ಕೆ.ಪಿ.ಆರ್ ರಾವ್ ರಸ್ತೆಯ ದುರವಸ್ಥೆಗೆ ಇನ್ನೂ ಪರಿಹಾರವಾಗಿಲ್ಲ. ಮಳೆಗೆ ಮುಂಚಿತವೇ ರಸ್ತೆ ಹಾನಿಯಾಗಲು ಆರಂಭಿಸಿದ್ದರೂ ಮಳೆಗೆ ಪೂರ್ಣ ನಾಶವಾಗಿದೆ. ಹಾನಿಗೊಂಡ ರಸ್ತೆಯ ಒಂದು ಬದಿ ವಾಹನಗಳನ್ನು ನಿಲ್ಲಿಸುವುದರಿಂದಾಗಿ ವ್ಯಾಪಾರಿಗಳ ಸಮಸ್ಯೆ ಹೆಚ್ಚಿದೆ. ಈ ಪ್ರದೇಶದಲ್ಲಿ ಟೆಲಿಕಾಂ ಕಚೇರಿ, ಸಿನಿಮಾ ಟಾಕೀಸ್ ಸಹಿತ ಹಲವು ಸಂಸ್ಥೆಗಳಿದ್ದು,ದಟ್ಟಣೆ ರಸ್ತೆ ಇದಾಗಿದೆ. ಮಳೆ ಆರಂಭಕ್ಕೂ ಮುಂಚಿತ ಈ ರಸ್ತೆಯ ಪ್ರಧಾನ ಅಂಚೆ ಕಚೇರಿಯಿಂದ ಕೆಎಸ್‌ಆರ್‌ಟಿಸಿ ನಿಲ್ದಾಣವರೆಗೆ ಕಾಂಕ್ರೀಟ್ ಹಾಕಿ ದುರಸ್ತಿಗೊಳಿಸಬೇಕೆಂದು ವ್ಯಾಪಾರಿಗಳು ಆಗಹಿಸಿದ್ದಾರೆ. ಇದಕ್ಕೆ  ನಗರಸಭೆ ಮುಂದಾಗಬಹುದೆಂದು ವ್ಯಾಪಾರಿಗಳು ನಿರೀಕ್ಷೆ ಹೊಂದಿದ್ದಾರೆ.

RELATED NEWS

You cannot copy contents of this page