ಕಾರು ಮಗುಚಿಬಿದ್ದು ಅಸಿಸ್ಟೆಂಟ್ ಕಲೆಕ್ಟರ್ ಮತ್ತು ಗನ್‌ಮ್ಯಾನ್ ಜಖಂ

ಕಾಸರಗೋಡು: ಕಾರು ಮಗುಚಿಬಿದ್ದು ಕಾಸರಗೋಡು ಅಸಿಸ್ಟೆಂಟ್ ಕಲೆಕ್ಟರ್ ಮತ್ತು ಅವರ ಗನ್‌ಮ್ಯಾನ್ ಗಾಯಗೊಂಡ ಘಟನೆ ಚೆಮ್ನಾಡ್ ಬಳಿ ನಿನ್ನೆ ನಡೆದಿದೆ.

ಅಸಿಸ್ಟೆಂಟ್ ಕಲೆಕ್ಟರ್ ಚೆಂಗನಾಶ್ಶೇರಿ ನಿವಾಸಿ ದಿಲೀಪ್ ಕೆ ಕೈನಿಕರ (೨೯) ಮತ್ತು ಅವರ ಗನ್‌ಮ್ಯಾನ್ ಚೆರ್ವತ್ತೂರಿನ ರಂಜಿತ್ ಕುಮಾರ್ (೩೧) ಗಾಯಗೊಂಡಿದ್ದು, ಇವರನ್ನು ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ.  ನಿನ್ನೆ ಸಂಜೆ ೩.೩೦ರ ಚೆಮ್ನಾಡ್ ಲೇಸ್ಯತ್ ತಿರುವು ದಾರಿಯಲ್ಲಿ ಈ ಅಪಘಾತ ನಡೆದಿದೆ. ಕಾರು ಚಾಲಕ  ಬೋವಿಕ್ಕಾನದ ಗೋಪಾಲನ್ (೫೦) ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

ಡಿಜಿಟಲ್ ಸರ್ವೇಯಂಗವಾಗಿ ಅಸಿಸ್ಟೆಂಟ್ ಕಲೆಕ್ಟರ್ ನಿನ್ನೆ  ಮಾಂಙಾಡ್ ಬಾರಾ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಕಾರಿನಲ್ಲಿ  ಅತ್ತ ತೆರಳುತ್ತಿದ್ದರು. ಆಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಲಕ್ಕೆ ಮಗುಚಿ ಬಿದ್ದಿದೆ. ಊರವರು ತಕ್ಷಣ ಗಾಯಾಳುಗಳನ್ನು ಜನರಲ್ ಆಸ್ಪತ್ರೆಗೆ ಸಾಗಿಸುವಲ್ಲಿ

You cannot copy contents of this page