ಚಿರಂಜೀವಿ ಕ್ಲಬ್ ನೇತೃತ್ವದಲ್ಲಿ ರಕ್ತದಾನ, ಹೃದಯ ತಪಾಸಣೆ ಶಿಬಿರ
ಕುಂಬಳೆ: ಚಿರಂಜೀವಿ ಕ್ಲಬ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ನಡೆದ ರಕ್ತದಾನ ಶಿಬಿರ ಮತ್ತು ಹೃದ್ರೋಗ ತಪಾಸಣೆಯನ್ನು ಡಾ| ಶಾಂಭವಿ ಕಿಶೋರ್ ಉದ್ಘಾಟಿಸಿ ದರು. ಅವರು ಮಾತನಾಡಿ ರಕ್ತದಾನ ಮಾಡಿದರೆ ಯಾರಿಗೂ ಯಾವ ತೊಂದರೆಯೂ ಉಂಟಾಗುವುದಿಲ್ಲ, ಬದಲಾಗಿ ನಮ್ಮ ರಕ್ತದಿಂದ ಮತ್ತೊಬ್ಬರ ಜೀವವನ್ನು ನಮಗರಿವಿಲ್ಲ ದಂತೆಯೇ ಕಾಪಾಡಿದಂತಾಗುತ್ತದೆ ಎಂದರು. ಆರೋಗ್ಯವಂತ ಯಾವುದೇ ವ್ಯಕ್ತಿಗೂ ರಕ್ತದಾನ ಮಾಡಬಹುದೆಂದು ಅವರು ನುಡಿದರು. ಕುಂಬಳೆಯ ಜನಮೈತ್ರಿ ಪೊಲೀಸ್, ಶಾಂತಿಪಳ್ಳ ಫ್ರೆಂಡ್ಶಿಪ್ ಬಾಯ್ಸ್, ಭಾಸ್ಕರನಗರ ನವೋದಯ ಫ್ರೆಂಡ್ಸ್ ಕ್ಲಬ್, ವಿನಾಯಕ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಸಹಕಾರದಿಂದ ರಕ್ತದಾನ ಶಿಬಿರ ನಡೆಯಿತು. ಮಂಗಳೂರು ಬ್ಲಡ್ ಲೈನ್ ಚಾರಿಟಿ ಟ್ರಸ್ಟ್, ಯೇನಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಶಿಬಿರ ನಡೆಸಿಕೊಟ್ಟರು.
ಕ್ಲಬ್ ಅಧ್ಯಕ್ಷ ಕೃಷ್ಣ ಗಟ್ಟಿ ಕುಂಬಳೆ ಅಧ್ಯಕ್ಷತೆ ವಹಿಸಿದರು. ಕುಂಬಳೆ ಪಂ. ಅಧ್ಯಕ್ಷೆ ತಾಹಿರಾ ಯೂಸಫ್, ಸಿಐ ಕೆ.ಪಿ.ವಿನೋದ್ ಕುಮಾರ್, ಪೊಲೀಸ್ ಠಾಣೆಯ ಪಿ.ಕೆ. ಪ್ರಮೋದ್, ಗೋವಿಂದನ್ ಕೆ, ಎಂ.ನಾ. ಚಂಬಲ್ತಿಮಾರ್, ವಿಜಯ ಕುಮಾರ್ ಪಿ, ಪ್ರೇಮಾವತಿ ಸತೀಶ್ ಶೆಟ್ಟಿ, ಅನಿಲ್ ಕುಮಾರ್, ಮೊಯ್ದು ಸೀತಾಂಗೋಳಿ, ರಾಜೇಶ್, ಶ್ರೀನಿವಾಸ ಕೆ, ಮನೋಜ್ ಕುಮಾರ್ ಬಿ ಮಾತನಾಡಿದರು. ಪ್ರಸಾದ್ ಕುಮಾರ್ ಕುಂಬಳೆ ಸ್ವಾಗತಿಸಿ, ನಾರಾಯಣ ಕುಲಾಲ್ ವಂದಿಸಿದರು.